ಕೊಪ್ಪದ ನಾರ್ವೆ ಸ್ವಯಂಪ್ರಕಾಶ ಸರಸ್ವತಿ ಪ್ರೌಢಶಾಲೆಯಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಜನಾರ್ಧನ್ ಮಂಡಗಾರು ರವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನೆರೆದಿದ್ದ ಜನರಿಗೆ ಆಶೀರ್ವಚನವನ್ನು ನೀಡಿದರು.
ಮನುಷ್ಯ ವೈಯಕ್ತಿಕ ಉನ್ನತಿ, ಕುಟುಂಬದ ಕ್ಷೇಮ, ಸಮಾಜದ ಹಿತ, ದೇಶದ ಅಭಿವೃದ್ಧಿ, ವಿಶ್ವದ ಕಲ್ಯಾಣ ಎಂಬ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ನಡೆಸಬೇಕು, ಈ ರೀತಿಯಾಗಿ ಜೀವನವನ್ನು ನಡೆಸುವವರು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಜನಾರ್ಧನ್ ಮಂಡಗಾರು ಕಿರುಪರಿಚಯ
ಜನಾರ್ಧನ್ ಮಂಡಗಾರು ಇವರು ಸತತ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿ ಹೊರಹೊಮ್ಮಿದ್ದಾರೆ.
ಶಿಕ್ಷಕರಾಗಿ ಮಾತ್ರವಲ್ಲದೆ ಪುಸ್ತಕಪ್ರೇಮಿ, ಯಕ್ಷಗಾನ ವೇಷಧಾರಿ, ತಾಳಮದ್ದಳೆಯ ಅರ್ಥಗಾರಿಕೆ, ಉಪನ್ಯಾಸಕ, ನಿರೂಪಕ ಹಾಗೂ ಉತ್ತಮ ಭಾಷಣಕಾರರಾಗಿ, ಯುವಜನ ಮೇಳದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಜನಮೆಚ್ಚಿದ ಶಿಕ್ಷಕ ಎಂದು ಶಿಕ್ಷಣ ಇಲಾಖೆಯಿಂದ ನೀಡುವ ಪ್ರಶಸ್ತಿಗೆ ಮತ್ತು ಅನೇಕ ಸಂಘ ಸಂಸ್ಥೆಗಳ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ಈ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಎ. ಎಸ್ ರಾಘವೇಂದ್ರರಾವ್, ಕಾರ್ಯದರ್ಶಿ ಕೆ ಆರ್ ಚಂದ್ರಶೇಖರ್, ಸಹ ಕಾರ್ಯದರ್ಶಿ ಶಬೀರ್, ನಿರ್ದೇಶಕರಾದ ಬಿ ಪಿ ಚಿಂತನ್ ಬೆಳಗೊಳ, ಗಿರೀಶ್, ವಸಂತಕುಮಾರಿ ಮುಂತಾದವರು ಪಾಲ್ಗೊಂಡಿದ್ದರು.



0 Comments