ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕಿನ ಕೆಲವು ವ್ಯಕ್ತಿಗಳು ತಮ್ಮ ಖಾಸಗಿ ವಾಹನದಲ್ಲಿ ಅನಧಿಕೃತ ಬಾಡಿಗೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ಮೇಲೆ ಕೂಡಲೇ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಶೃಂಗೇರಿ ತಾಲೂಕಿನ ಪ್ರವಾಸಿ ವಾಹನಗಳ ಮಾಲೀಕರು ಮತ್ತು ಚಾಲಕರು ಪ್ರಾದೇಶಿಕ ಸಾರಿಗೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.



ಶೃಂಗೇರಿ ತಾಲೂಕಿನ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ತಮ್ಮ ಖಾಸಗಿ ವೈಟ್ ಬೋರ್ಡ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬಾಡಿಗೆ ಮಾಡುತ್ತಿದ್ದಾರೆ ಈ ಕುರಿತು ಹಿಂದೆಯೇ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪ್ರವಾಸಿ ವಾಹನಗಳ ಮಾಲೀಕರು ಮತ್ತು ಚಾಲಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಹೆಚ್ಚಿನ ಮೊತ್ತದ ತೆರಿಗೆ ಹಾಗು ವಿಮೆ ಪಾವತಿ ಮಾಡುವುದು ಹಳದಿ ಬೋರ್ಡ್ ವಾಹನ ಓಡಿಸುವ ಚಾಲಕರು ಮತ್ತು ಮಾಲೀಕರು. ಅಕ್ರಮವಾಗಿ ಬಾಡಿಗೆ ಮುಖಾಂತರವಾಗಿ ವಾಹನ ಓಡಿಸುತ್ತಿರುವ ಹಾಗೂ ಅಭದ್ರತೆಯ ಮೂಲಕ ಪ್ರಯಾಣಿಕರ ಬಾಡಿಗೆ ಮಾಡುತ್ತಿರುವ ವಾಹನಗಳನ್ನು ಜಪ್ತಿ ಗೊಳಿಸಬೇಕೆಂದು  ಶೃಂಗೇರಿ ತಾಲೂಕಿನ ಪ್ರವಾಸಿ ವಾಹನಗಳ ಮಾಲೀಕರು ಹಾಗೂ ಚಾಲಕರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ದಿನೇಶ್, ಕಾರ್ಯದರ್ಶಿ ಸುನಿಲ್, ಉಪಾಧ್ಯಕ್ಷರಾದ ಪ್ರವೀಣ್, ಸಹ ಕಾರ್ಯದರ್ಶಿ ಸಂತೋಷ್, ಗೌರವಾಧ್ಯಕ್ಷರಾದ ಕೃಷ್ಣಮೂರ್ತಿ, ಹಾಗೂಸದಸ್ಯರುಗಳಾದ ಸಂದೀಪ, ಮಹೇಶ್, ನಾಗರಾಜ್, ರವಿ, ಗಿರೀಶ್, ಸುಮುಖ, ಅರ್ಜುನ ಇನ್ನಿತರರು ಉಪಸ್ಥಿತರಿದ್ದರು.