ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕಾಲೇಜಿಗೆ ಹೋಗುವಾಗ ಪ್ರೀತಿಸಿ ಮದುವೆಯಾದ ದಂಪತಿಗಳು ಮದುವೆಯ ನಂತರದ ದಿನಗಳಲ್ಲಿ ಕೆಲ ಸಾಮಾನ್ಯ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ಈ ವಿಚಾರವಾಗಿ ಪತ್ನಿಯು ಗಂಡನ ಮನೆ ಬಿಟ್ಟು ತನ್ನ ಮನೆಯಿಂದಲೇ ಕಂಪ್ಯೂಟರ್ ಕ್ಲಾಸ್ ಗೆ ಶಿವಮೊಗ್ಗಕ್ಕೆ ಹೋಗಿ ಬರುತ್ತಿದ್ದಳು.
ಈ ಮಧ್ಯದಲ್ಲಿ ಆಕೆಯ ಪತ್ನಿ ಶೋಯಬ್ ವಾಸು ಸತ್ಯ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಆಕೆಯನ್ನು ಕೊಲೆ ಮಾಡಿದ್ದಾನೆ, ಹಾಗೂ ನಂತರ ಆಕೆಯ ಚಿನ್ನಾ ಭರಣಗಳ ಜೊತೆಗೆ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ದಂಪತಿಗೆ ಒಂದು ವರ್ಷ ಪ್ರಾಯದ ಮಗು ಇದೆ ಎಂದು ತಿಳಿದುಬಂದಿದೆ.
ಪೊಲೀಸರು ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆಯನ್ನು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

0 Comments