ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಅನೈತಿಕ ಪೋಲಿಸ್ ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಸಮೀಪದ ಮಜ್ಜಿಗೆ ಹಳ್ಳಿಯ ಓರ್ವ ಮುಸ್ಲಿಂ ಯುವತಿ ಕೆಲಸಕ್ಕೆ ಹೋಗಲು ತಡವಾಗಿದ್ದ ಕಾರಣ ಶಿವಮೊಗ್ಗದ ಗಾಂಧಿ ಬಜಾರ್‌ವರೆಗೆ ಬಿಡುವಂತೆ ಅದೇ ದಾರಿಯಲ್ಲಿ ಹೊರಟಿದ್ದ ಗ್ರಾಮದ ಸ್ಥಳೀಯ ಯುವಕನನ್ನು ವಿನಂತಿಸಿದ್ದಾಳೆ. ಆ ಯುವಕ ಗಾಂಧಿ ಬಜಾರ್‌ನಲ್ಲಿ ಯುವತಿಯನ್ನು ಬಿಡುವಾಗ ಅದೇ ಸ್ಥಳದಲ್ಲಿದ್ದ ಮುಸ್ಲಿಂ ಯುವಕರು ಅಡ್ಡಗಟ್ಟಿ ಡ್ರಾಪ್ ನೀಡಿದ ಯುವಕನನ್ನು ಥಳಿಸಿದ್ದಾರೆ.

ಈ ಸಮಯದಲ್ಲಿ ಅದೇ ಸ್ಥಳದಲ್ಲೇ ಇದ್ದ ಕೆಲ ಹಿಂದೂ ಯುವಕರು ಪ್ರತ್ಯುತ್ತರವಾಗಿ ಹೊಡೆದಾಟಕ್ಕೆ ಸಜ್ಜಾಗಿದ್ದಾರೆ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ತಪ್ಪಿತಸ್ಥ ಕಿಡಿಗೇಡಿ ಗಳನ್ನು ತಕ್ಷಣವೇ ಬಂಧಿಸಲಾಗಿದ್ದು ಸಾರ್ವಜನಿಕ ವಲಯದಲ್ಲಿ ಬೇರೆ ಯಾವುದೇ ರೀತಿಯ ವದಂತಿಗಳನ್ನು ಯಾರೂ ಕೂಡ ಹಬ್ಬಿಸಬಾರದು, ಆ ರೀತಿಯ ಯಾವುದಾದರೂ ವದಂತಿಗಳು ಹಬ್ಬಿದಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.