ಕೊಪ್ಪ:(ನ್ಯೂಸ್ ಮಲ್ನಾಡ್ ವರದಿ) ದೈವಿಗುಣವನ್ನು ಬೆಳೆಸಿಕೊಂಡರೆ ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ, ಅದನ್ನು ಅಳವಡಿಸಿಕೊಳ್ಳಲು ಪ್ರತಿದಿನ ದೇವರ ಪ್ರಾರ್ಥನೆ ಮಾಡಬೇಕು ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಭಾನುವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿವಿಧತೆಯಲ್ಲಿ ಏಕತೆಯನ್ನು ಕಂಡ ಧರ್ಮವೆಂದರೆ ಅದು ಹಿಂದೂ ಧರ್ಮ, ಪ್ರಸ್ತುತ ಧಾರ್ಮಿಕ ವೈವಿದ್ಯವನ್ನು ಒಪ್ಪಿಕೊಳ್ಳದ ಸಂಕುಚಿತ ಮನೋಭಾವನೆಯಿಂದಾಗಿ ಜನರಲ್ಲಿ ವೈಷಮ್ಯ ಬೆಳೆಯಲು ಕಾರಣವಾಗಿದೆ. ಕೆಲವು ಸ್ವಹಿತಾಸಕ್ತಿಗಳು ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳಲು ವೈವಿಧ್ಯವನ್ನೇ ನಕಾರಾತ್ಮಕವಾಗಿ ಚಿತ್ರಿಸುವ ಕೆಲಸವನ್ನು ಮಾಡುತ್ತಿದೆ, ಜನರ ನುಡಿ ಮತ್ತು ನಡೆಯಲ್ಲಿ ವ್ಯತ್ಯಾಸವಿದ್ದರೆ ನಾಸ್ತಿಕರು ಹೆಚ್ಚಾಗುತ್ತಾರೆ ಎಂದು ಮಾಹಿತಿಯನ್ನು ನೀಡಿದರು.
ಸಮಾವೇಶದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರವಿಂದ ಸೋಮಯಾಜಿ, ಸಾಮಾಜಿಕ ಕಾರ್ಯಕರ್ತೆ ರೇಖಾ ಪ್ರೇಮ್ ಕುಮಾರ್, ಶಿವಮೊಗ್ಗದ ವಕೀಲೆ ಪ್ರೇಮಾ, ಹಿಂದೂ ಸನಾತನ ಸಮಾಜ ಪರಿಷತ್ ನ ಪದಾಧಿಕಾರಿಗಳಾದ ಡಿ.ಪಿ ಅನಸೂಯಾ ಕೃಷ್ಣಮೂರ್ತಿ, ಪದ್ಮಾವತಿ ರಮೇಶ್, ಸುಧಾ ಮೋಹನ್, ಗಾಯತ್ರಿ ಶೆಟ್ಟಿ, ರೇಖಾ ಪ್ರಕಾಶ್ ಮುಂತಾದವರು ಇದ್ದರು.



0 Comments