ಚಿಕ್ಕಮಗಳೂರು : ರಾಜ್ಯದಲ್ಲಿ ರೈತರು ನಿರಾಶ್ರಿತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಸರಕಾರದ ವಿರುದ್ಧ ಹೋರಾಟ ನಡೆಸಲು ಪಕ್ಷ ಸಿದ್ಧವಾಗಿದೆ ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿಕೆ ನೀಡಿದ್ದಾರೆ.

ಶ್ರೀ ನಾರಾಯಣಗುರು ಸಭಾಭವನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಕಸಬಾ ಹೋಬಳಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ಬೇಸತ್ತು ,ಜನರು  ಪ್ರಾದೇಶಿಕ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ಜನರು ಪಕ್ಷದ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕಿದೆ. ಕೊಡಗಿನಲ್ಲಿ ಅತಿವೃಷ್ಟಿಯಾದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ. ಕುಮಾರಸ್ವಾಮಿ ಅವರು ಕೂಡಲೇ ಎಲ್ಲಾ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಟ್ಟಿದ್ದರು. ರೈತರ ಸಾಲ ಮನ್ನಾ ಮಾಡಿದರು. ಅಲ್ಲದೆ ಅಧಿಕಾರವಿಲ್ಲದಿದ್ದ ಸಮಯದಲ್ಲಿ  ರೈತರ ಸಂಕಷ್ಟ ನೋಡಿ ಪ್ರತಿ ರೈತರಿಗೂ 50 ಸಾವಿರ ರೂ ಸಹಾಯಧನ ನೀಡಿದ್ದರು  ಇಂತಹ ಅನೇಕ ಜನಪರವಾದ ಕಾರ್ಯಕ್ರಮ ರೂಪಿಸಲು ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್. ಹೆಚ್. ದೇವರಾಜ್ ಮಾತನಾಡಿ, ಇಲ್ಲಿನ ಎಂಎಲ್ಎ,  ಉಪಸಭಾಪತಿ ಹಾಗೂ ಮಾಜಿ ಸಚಿವೆ ಇವರಿಗೆ ಅಧಿಕಾರ ಬೆಂಬಲವಿದೆ. ಇದರಿಂದ ರಾಜರೋಷವಾಗಿ ಅಕ್ರಮವಾಗಿ ಮರಳು ಪಡೆದಿರುವುದು  ತಾಲೂಕಿನ ಜನತೆಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಬಡವರಿಗೆ ಆಶ್ರಯ ಮನೆ ಕಟ್ಟಿಕೊಳ್ಳಲು ಒಂದು ಲೋಡ್ ಮರಳು ಸಿಗುತ್ತಿಲ್ಲ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಮಲೆಮನೆ ಮತ್ತು ಮದುಗುಂಡಿ ಇನ್ನಿತರ  ನಿರಾಶ್ರಿತರಿಗೆ ಇನ್ನೂ ಮನೆ ಕಟ್ಟಿಸಿ ಕೊಟ್ಟಿಲ್ಲ.  ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ನಮ್ಮ ಕಾರ್ಯಕರ್ತರು ಧ್ವನಿ ಎತ್ತಬೇಕು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ  ಹೆಚ್ ಡಿ ದೇವೇಗೌಡರ ಜನಪರ ಕಾರ್ಯಕ್ರಮದ ಬಗ್ಗೆ ಪ್ರತಿ ಹಳ್ಳಿ ಹಳ್ಳಿ ಜನರಿಗೆ ಮಾಹಿತಿ ನೀಡುವ ಮೂಲಕ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಜೆಡಿಎಸ್  ಜಿಲ್ಲಾದ್ಯಕ್ಷ ರಂಜನ್ ಅಜಿತ್ ಕುಮಾರ್  ಕಾರ್ಯಕ್ರಮವನ್ನು  ಉದ್ಘಾಟಿಸಿ ರಾಜ್ಯದಲ್ಲಿ ಮುಂದಿನಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲಿದ್ದ  ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷ ಸೇರಲಿದ್ದು ಮುಂದಿನಾ ಬಾರಿ ಹೆಚ್ಚಿನ ಶಕ್ತಿ ಬರಲಿದೆ ಎಂದು ಮಾತನಾಡಿದರು.

ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಎಂ.ಕೆ.ರವಿ ಅಧ್ಯಕ್ಷತೆ ವಹಿಸಿದ್ದರು, ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ .ಸುರೇಶ್ ಮುಖಂಡರಾದ ಬಾಲಕೃಷ್ಣೇಗೌಡ , ಡಿ.ಬಿ. ಅಶ್ವಥ್, ಮಂಜಪ್ಪ ಗೌಡ, ಬಿ. ಎಂ. ಬೈರೇಗೌಡ,ಝಕರಿಯ, ಸುಧಾ ,ಮಂಜುನಾತ್, ಜ್ಯೋತಿ,ವಿಠಲ್, ಶಬ್ಬಿರ್ ಅಹಮ್ಮದ್ ಎಂ.ಎಸ್. ಅಶೋಕ್, ಮತ್ತಿತರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು.