ಶೃಂಗೇರಿ : ( ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಭೇಟಿ ನೀಡಿದರು.
ಶೃಂಗೇರಿಯ ಕೊರಡಕಲ್ಲು ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 11.30ಕ್ಕೆ ಆಗಮಿಸಿದ ಅವರನ್ನು ಸಕಲ ರಕ್ಷಣೆಯೊಂದಿಗೆ ಹಾಗೂ ಸರ್ಕಾರಿ ಗೌರವದೊಂದಿಗೆ ಶ್ರೀ ಶಾರದಾ ಪೀಠಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕುಟುಂಬ ಸಮೇತರಾಗಿ ಆಗಮಿಸಿದರು. ತಾಯಿ ಶಾರದೆಯ ಹಾಗೂ ಜಗದ್ಗುರುಗಳ ದರ್ಶನ ಪಡೆದರು.
ಹಾಗೆಯೇ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಹ ಆಗಮಿಸಿದ್ದು, ಶಾರದಾಂಬೆಯ ಆಶೀರ್ವಾದ ಪಡೆದರು.

0 Comments