ಹಾಸನ : ( ನ್ಯೂಸ್ ಮಲ್ನಾಡ್ ವರದಿ) ಮೀನು ಹಿಡಿಯಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ.
ರಾತ್ರಿ ಕೆರೆಯಲ್ಲಿ ಮೀನು ಹಿಡಿಯಲೆಂದು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ಕೆರೆಗೆ ಹೋದ ಮಂಜುನಾಥ್ (32) ಮತ್ತು ಪ್ರತಾಪ್ (33) ಈರ್ವರು ಮೃತರೆಂದು ಪತ್ತೆ ಮಾಡಲಾಗಿದೆ. ರಾತ್ರಿ ಕತ್ತಲಿನ ಸಮಯದಲ್ಲಿ ಆಯತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮೀನು ಹಿಡಿಯಲು ಹೋಗಿ ತಮ್ಮ ಜೀವನವನ್ನೇ ಕಳೆದುಕೊಂಡ ಇಬ್ಬರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತರ ಶರೀರವನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ. ಈ ಘಟನೆಯ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

0 Comments