ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ನಾಡಹಬ್ಬ ದಸರಾದ ಅಂಗವಾಗಿ ರಾಜ್ಯದ ಹಲವಾರು ಮಂದಿರಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತಿದೆ.
ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಹೋಬಳಿ ವ್ಯಾಪ್ತಿಯ ಶಕಟಪುರ ಮಠಕ್ಕೆ ಭೇಟಿ ನೀಡಿ ದೇವಿಯನ್ನು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶಾಸಕರ ಪತ್ನಿ ಡಿ. ಪುಷ್ಪ ರವರು ಸಹ ಶಾಸಕರೊಂದಿಗೆ ಉಪಸ್ಥಿತರಿದ್ದರು. ಪೂಜಾ ನಂತರದಲ್ಲಿ ಶ್ರೀಮಠದ ಜಗದ್ಗುರುಗಳ ಆಶೀರ್ವಾದವನ್ನು ಸಹ ದಂಪತಿಗಳು ಪಡೆದರು.
ನಂತರದಲ್ಲಿ ಹರಿಹರಪುರ ಶ್ರೀ ಮಠಕ್ಕೆ ಭೇಟಿ ನೀಡಿದ ಶಾಸಕ ರಾಜೇಗೌಡ ಅವರು ದೇವಿ ಶಾರದೆಯ ದರ್ಶನವನ್ನು ಪಡೆದು, ವಿಶೇಷ ಸೇವೆ ಸಲ್ಲಿಸಿದರು ನಂತರದಲ್ಲಿ ಶ್ರೀ ಮಠದ ಗುರುಗಳ ಆಶೀರ್ವಾದವನ್ನು ಪಡೆದರು.
ನವದುರ್ಗೆಯರು ಎಲ್ಲರ ಬಾಳಿಗೂ ಒಳಿತನ್ನುಂಟು ಮಾಡಲಿ, ಸರ್ವರ ಜೀವನವು ಸುಖಮಯವಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ರಾಜೇಗೌಡ ತಿಳಿಸಿದರು.

0 Comments