ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೆನರಾ ಬ್ಯಾಂಕ್ ನ ಚೆಕ್ ಒಂದನ್ನು ಕದ್ದು ನಕಲಿ ಸಹಿ ಮಾಡಿ ಹಣ ಕದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅತ್ತಿಗುಂಡಿ ನಿವಾಸಿ ಮಸೂದ್ ಅಹ್ಮದ್ ಎಂಬ ವ್ಯಕ್ತಿಯ ಚೆಕ್ ಅನ್ನು ನಾಲ್ವರು ಆರೋಪಿಗಳು ಸೇರಿ ಕಳ್ಳತನ ಮಾಡಿ ನಕಲಿ ಸಹಿ ದಾಖಲಿಸಿ 1.60 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಿಂದ ತೆಗೆದಿದ್ದಾರೆ.
ಮಗದೊಂದು ಚೆಕ್ ಅನ್ನು ಒಂದು ಖಾಸಗೀ ಹಣಕಾಸು ಸಂಸ್ಥೆಗೆ ನೀಡಿದ್ದಾರೆ. ಆರೋಪಿಗಳು ಅದರಲ್ಲಿ 2.50 ಲಕ್ಷವನ್ನು ನಮೂದಿಸಿದ್ದಾರೆ, ಖಾಸಗೀ ಸಂಸ್ಥೆಯವರು ಬ್ಯಾಂಕಿನಲ್ಲಿ ಹಣ ತೆಗೆಯಲೆಂದು ಹೋದಾಗ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಚೆಕ್ ನ ಅಧಿಕೃತ ವಾರಸುದಾರ ಮಸೂದ್ ಅಹ್ಮದ್ ಗೆ ಬ್ಯಾಂಕ್ ನೊಟೀಸ್ ನೀಡಿದೆ. ಈ ನೋಟಿಸ್ ನಿಂದಾಗಿ ಮಸೂದ್ ಅಹ್ಮದ್ ಅವರ ಚೆಕ್ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕಿನ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ :
ಚಿಕ್ಕಮಗಳೂರಿನ ಬಸವನಹಳ್ಳಿಯ ಕೆನರಾ ಬ್ಯಾಂಕ್ ನ ಸಿಬ್ಬಂದಿಯೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗೂ ಬ್ಯಾಂಕಿನ ಸಿಬ್ಬಂದಿಯ ಮೇಲೆ ಸಹ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮೊಹಮ್ಮದ್ ಯೂಸುಫ್,ಶಕೀಲ್ ಅಹಮದ್,ಇಕ್ಬಾಲ್ ಎಂದು ಗುರುತಿಸಲಾಗಿದೆ.

0 Comments