ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಶ್ರೀ ಪ್ಲವನಾಮ ಸಂವತ್ಸರದ ಆಶ್ವಯುಜ ಮಾಸ ಶುಕ್ಲಪಕ್ಷದ ಶರನ್ನವರಾತ್ರಿಯ ಎರಡನೇಯ ದಿನವಾದ ಇಂದು ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀಕ್ಷೇತ್ರ ಶಕಟಪುರಂ ನ ಶ್ರೀ ರಾಜರಾಜೇಶ್ವರೀ ಅಮ್ಮನವರಲ್ಲಿ ಇಂದು ವಿಶೇಷವಾಗಿ ಆರ್ಯದುರ್ಗಾ ಪೂಜೆಯು ನೆರವೇರಿತು. ಶರನ್ನವರಾತ್ರಿಯ ಎರಡನೆಯ ದಿನವಾದ ಇಂದು ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಆರ್ಯ ದುರ್ಗಾಪೂಜೆ ಭಕ್ತ ಸಮೂಹದೊಂದಿಗೆ ನೆರವೇರಿತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಶಕಟಪುರದಲ್ಲಿ ಶ್ರದ್ಧಾ ಭಕ್ತಿಯಿಂದ, ವಿಜ್ರಂಭಣೆಯಿಂದ ಶರನ್ನವರಾತ್ರಿಯ ಪೂಜೆ ಪುನಸ್ಕಾರಗಳು ನೆರವೇರುತ್ತಿದೆ.
ಹಲವಾರು ವರ್ಷಗಳ ಪ್ರಸಿದ್ಧಿ ಇರುವ ಶ್ರೀಮಠದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು ಚಾಲನೆಗೊಂಡಿದ್ದು ಭಕ್ತರು ಮಾಸ್ಕ್ ಧರಿಸಿಕೊಂಡು ಕೊರೋನಾ ನಿಯಮಾವಳಿಗಳ ಪಾಲನೆ ಮಾಡಿಕೊಂಡು ದೇವಸ್ಥಾನಕ್ಕೆ ಬರುವಂತೆ ಕೋರಿದೆ.

0 Comments