ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ವಾಹನಗಳು ಮಗುಚಿ ಬೀಳುವಷ್ಟು ಹೊಂಡಗಳಿಂದ ಕೂಡಿದ ವಾಟೇಗನಹಳ್ಳಿ ರಸ್ತೆಯ ಕುರಿತಾಗಿ ಈ ಹಿಂದೆ ನ್ಯೂಸ್ ಮಲ್ನಾಡ್ ವರದಿಯೊಂದನ್ನು ಪ್ರಕಟಿಸಿತ್ತು, ನ್ಯೂಸ್ ಮಲ್ನಾಡ್ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿವರ್ಗ ದುರಸ್ಥಿ ಕಾರ್ಯವನ್ನು ಆರಂಭ ಮಾಡಿದೆ.

ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಅಂದಾಜು 4 ಲಕ್ಷ ವೆಚ್ಚ ಬಿಡುಗಡೆಯಾಗಿದೆ ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಂದಿ - ವಾಟೇಗನಹಳ್ಳಿ ಮೂಲಕ ಹಾದು ಹೋಗುವ ಸುಮಾರು 5 ಕಿ.ಮೀ.ನಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ 20ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಸಂಚಾರ ಮಾಡಲು ತೀವ್ರ ಅನಾನುಕೂಲ ಸಹ ಉಂಟಾಗಿತ್ತು. ಈ ಕುರಿತು ವಿಸ್ಕೃತವಾಗಿ ನ್ಯೂಸ್ ಮಲ್ನಾಡ್ ವರದಿ ಮಾಡಿತ್ತು. ಸದ್ಯ ಕಾಮಗಾರಿ ಆರಂಭವಾಗಿರುವುದು ಸ್ಥಳೀಯರಲ್ಲಿ ಆಶಾಭಾವನೆಯನ್ನು ಮೂಡಿಸಿದೆ.

ನ್ಯೂಸ್ ಮಲ್ನಾಡ್ ಮಾಡಿದ ವರದಿ ಓದಲಿ ಈ ಲಿಂಕ್ ಕ್ಲಿಕ್ ಮಾಡಿ: ಕೆರೆಯಂತಾದ ರಸ್ತೆ : ಇಪ್ಪತ್ತಕ್ಕೂ ಅಧಿಕ ಗ್ರಾಮಗಳಿಗೆ  ಸಂಕಲ್ಪಿಸುವ ರಸ್ತೆಯ ದುರ್ವ್ಯವಸ್ಥೆ.

ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೂ ಸಹ ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಜನಸ್ನೇಹಿ ಕೆಲಸಗಳನ್ನು ಮಾಡಿ ಕೊಡಬೇಕೆಂಬುದು ನ್ಯೂಸ್ ಮಲ್ನಾಡ್ ನ ಆಶಯ.

ತನು ಕೊಟ್ಟಿಗೆಹಾರ, ವರದಿಗಾರರು.