ಮೂಡಿಗೆರೆ : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಿದ ರೂರಲ್ ಐಟಿ ಕ್ವಿಜ್ 2021 ರಲ್ಲಿ ನಳಂದ ಅಚೀವರ್ಸ್ ಅಸೆಂಟ್ ಪಿಯು ಕಾಲೇಜು ಮೂಡಿಗೆರೆಯ ಸನ್ಮಯ ಎಸ್ ಆರ್ ರವರು ಮೈಸೂರು ವಿಭಾಗ ಮಟ್ಟದಿಂದ ಆಯ್ಕೆಯಾಗಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಹೊರಹೊಮ್ಮಿದ್ದಾರೆ. ಮುಂದಿನ ಹಂತದಲ್ಲಿ ಕೂಡ ಉತ್ತಮ ಸಾಧನೆ ಮಾಡಲಿ ಎಂಬುದಾಗಿ ಸನ್ಮಯ ಅವರಿಗೆ ಅವರ ಸ್ನೇಹಿತರು ಹಾರೈಸಿದ್ದಾರೆ ಹಾಗೂ ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.

ನಳಂದ ಸಂಸ್ಥೆಯ ಕಾರ್ಯದರ್ಶಿಗಳಾದ ಸಾವಿತ್ರಿ ಹೆಚ್.ಎಸ್ ಮತ್ತು  ನಳಂದ ಶಾಲೆ ಹಾಗೂ ನಳಂದ ಪಿಯು ಕಾಲೇಜಿನ  ಅಚಿವರ್ಸ್, ಪ್ರಿನ್ಸಿಪಾಲ್, ಹಾಗೂ ಕಾಲೇಜಿನ  ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

ತನು ಕೊಟ್ಟಿಗೆಹಾರ, ವರದಿಗಾರರು.