ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ಬ್ಯಾಂಕ್ ನ ಮುಖ್ಯ ಶಾಖೆಯು ತನ್ನ ಸಿ ಎಸ್ ಆರ್ ಫಂಡ್ ನ ವತಿಯಿಂದ ಕಾಮಧೇನು ಗೋ ಶಾಲೆಗೆ ಆಂಬುಲೆನ್ಸ್ ಕೊಡುಗೆ ನೀಡಿದೆ.
ಟಾಟಾ ವಾಹನವನ್ನು ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ನಂತೆ ಮಾರ್ಪಾಡು ಗೊಳಿಸುವ ಪ್ರಕ್ರಿಯೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರು ಚಾಲನೆ ನೀಡಿದರು. ಸಮಯದಲ್ಲಿ ಅವರೊಂದಿಗೆ ಬ್ಯಾಂಕಿನ ಸದಸ್ಯರು ಕೂಡ ಇದ್ದರು.
ಈ ಟಾಟಾ ವಾಹನವನ್ನು ಗೋವಿನ ಆಂಬುಲೆನ್ಸ್ ಆಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಬ್ಯಾಂಕಿನ ಸದಸ್ಯ ತಿಳಿಸಿದರು ಹಾಗೂ ಬ್ಯಾಂಕಿನ ಸಿ.ಎಸ್.ಆರ್ ಫಂಡನ್ನು ಉತ್ತಮ ಕಾರ್ಯಕ್ಕೆ ಮೀಸಲಿಟ್ಟು ಬಳಸಿ ಕೊಳ್ಳುವುದು ಒಳ್ಳೆಯ ಕೆಲಸವಾಗಿದೆ, ಮೂಕ ಪ್ರಾಣಿಗಳಿಗೆ ಈ ವಾಹನವು ಉಪಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಎಂ.ಡಿ ಡಾ. ಮಹಭಲೇಶ್ವರ, ಅಧ್ಯಕ್ಷರಾದ ಜಯರಾಮ್, ಸಿ.ಎಸ್.ಆರ್ ಫಂಡ್ ಮ್ಯಾನೇಜರ್ ಶ್ರೀನಿವಾಸ್ ದೇಶಪಾಂಡೆ. ಚಿಕ್ಕಮಗಳೂರು ವಿಭಾಗದ ಮ್ಯಾನೇಜರ್ ಜಾನ್ ಮತ್ತು ಬ್ಯಾಂಕಿನ ಅಧಿಕಾರಿವರ್ಗ ನಾಗೇಶ್ ಅಂಗೀರಸ, ಶ್ರೀ ರಾಮ್ ಅಂಗೀರಸ ಹಾಜರಿದ್ದರು.

0 Comments