ಚಿಕ್ಕಮಗಳೂರು : ಒಂದೇ ಕಟ್ಟಡದಲ್ಲಿದ್ದ ನಾಲ್ಕು ಅಂಗಡಿಗಳ ಮೇಲೆ ಕಳ್ಳರು ಕಳ್ಳತನ ನಡೆಸಿದ ಘಟನೆ ನಗರದ ಎಂ. ಜಿ. ರಸ್ತೆಯ ಗೋರೂರು ಕಟ್ಟಡದಲ್ಲಿ ನಡೆದಿದೆ.
ರಾತ್ರೋರಾತ್ರಿ ಒಂದೇ ಕಟ್ಟಡದ ನಾಲ್ಕು ಅಂಗಡಿಯ ಮೇಲೆ ಕೈಚಳಕ ತೋರಿದ ಕಳ್ಳರು ಮೂರು ಅಂಗಡಿಗಳಲ್ಲಿಯೂ ಹಣವನ್ನು ಹುಡುಕಾಡಿದ್ದಾರೆ. ಆದರೆ ಆ ಅಂಗಡಿಗಳಲ್ಲಿ ಹಣ ಸಿಗದೇ ಇದ್ದರಿಂದ ಅಂಗಡಿಗಳಿಂದ ಹಿಂದಿರುಗಿದ್ದಾರೆ.
ನಂತರ ಅದೇ ಕಟ್ಟಡದಲ್ಲಿದ್ದ ಮತ್ತೊಂದು ಅಂಗಡಿಗೆ ದಾಳಿ ನಡೆಸಿದ ಕಳ್ಳರು ಅಂಗಡಿಯೊಳಗೆ ನುಗ್ಗಿ ಹಣವನ್ನು ಹುಡುಕಿ ಆ ಅಂಗಡಿಯಲ್ಲಿದ್ದಂತಹ ಬರೋಬ್ಬರಿ 77 ಸಾವಿರ ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆ ಕಳ್ಳರು ಅಲ್ಲಿದ್ದ ಹಣವನ್ನು ಮಾತ್ರ ಕೊಂಡೊಯ್ಯದೇ ಅಲ್ಲಿದ್ದ ಕೃಷಿ ಭೂಮಿ ಮತ್ತು ಸೈಟ್ ಗಳ ದಾಖಲೆಗಳನ್ನು ಕೊಂಡೊಯ್ದಿದ್ದಾರೆ.
ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments