ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿದ್ದ ಕಣಜದ ಹುಳುಗಳು ಕಚ್ಚಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ ಒಬ್ಬರು ಭದ್ರಾವತಿಯ ಬಳ್ಳಾಪುರ ನಿವಾಸಿ ಸಿ. ಏನ್ ನಂಜಪ್ಪ(50), ಹಾಗೂ ಮತ್ತೊರ್ವ ವ್ಯಕ್ತಿ ತರೀಕೆರೆಯ ಮಲ್ಲಿಕಾರ್ಜುನ(55) ಎಂದು ತಿಳಿದುಬಂದಿದೆ.

ಭದ್ರಾನದಿ ದಡದ ತೋಟದಲ್ಲಿ ಅಡಿಕೆ ಕೊಯ್ಲು ಮಾಡಿ ಮಲ್ಲಿಕಾರ್ಜುನ್ ರವರು ಟ್ರ್ಯಾಕ್ಟರ್ ನಲ್ಲಿ ಬರುತ್ತಿದ್ದ ವೇಳೆಗೆ, ಟ್ರ್ಯಾಕ್ಟರ್ ನಲ್ಲಿದ್ದ ದೋಟಿ ಹೊಂಗೆ ಮರದಲ್ಲಿದ್ದ ಕಣಜದ ಗೂಡಿಗೆ ತಾಗಿ, ಟ್ರ್ಯಾಕ್ಟರ್ ನ ಹಿಂಭಾಗದಲ್ಲಿ ಬೈಕಿನಲ್ಲಿ ಬರುತ್ತಿದ್ದ ನಂಜಪ್ಪನವರ ಮೇಲೆ ಗೂಡು ಬಿದ್ದಿದೆ, ಇದರ ಪರಿಣಾಮ ಗೂಡಿನಲ್ಲಿದ್ದ ಹುಳಗಳು ಅವರನ್ನು ಮುತ್ತಿಕೊಂಡು ಕಚ್ಚಿದೆ, ಅವರು ಜೋರಾಗಿ ಕಿರುಚಾಡಿದಾಗ ಮಲ್ಲಿಕಾರ್ಜುನ್ ಟ್ರ್ಯಾಕ್ಟರ್ ನಿಲ್ಲಿಸಿ ನಂಜಪ್ಪನವರ ರಕ್ಷಣೆಗೆಂದು ಧಾವಿಸಿದರು ಆದರೆ ಅವರ ಮೇಲೂ ಕಣಜದ ಹುಳಗಳು ಆಕ್ರಮಣ ಮಾಡಿದ್ದರಿಂದ ಇಬ್ಬರೂ ಅಸ್ವಸ್ತಗೊಂಡರು.

ಘಟನೆಯ ನಂತರದಲ್ಲಿ ತೀವ್ರ ಅಸ್ವಸ್ಥರಾಗಿದ್ದ ನಂಜಪ್ಪ ಮತ್ತು ಮಲ್ಲಿಕಾರ್ಜುನರನ್ನು ಹುಳಗಳಿಂದ ರಕ್ಷಿಸಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನಪ್ಪಿದ್ದಾರೆ.