ಹಾಸನ : ಮೂಡಿಗೆರೆಯ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರ ಕಾರು ಹಾಗೂ ತಾಯಿ ಮತ್ತು ಮಗ ಸಂಚಾರ ಮಾಡುತ್ತಿದ್ದ ಬೈಕ್ ನಡುವೆ ಇಂದು ಅಪಘಾತ ಸಂಭವಿಸಿದೆ.
ಬೇಲೂರಿನ ಹನುಮಂತ ನಗರದ ಬಳಿ ಈ ಘಟನೆ ಸಂಭವಿಸಿದ್ದು, ಎಂ.ಪಿ ಕುಮಾರಸ್ವಾಮಿ ಅವರ ಕಾರು, ಬೈಕಿನಲ್ಲಿ ಸಂಚಾರ ಮಾಡುತ್ತಿದ್ದ ತಾಯಿ ಹಾಗೂ ಮಗನಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ, ಪರಿಣಾಮ ತಾಯಿಯು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಹಾಗೂ ಅವರ ಮಗನಿಗೆ ಗಂಭೀರ ಗಾಯ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಈ ವರೆಗೆ ತಿಳಿದು ಬಂದಿಲ್ಲ. ಈ ಸಂಬಂಧವಾಗಿ ಬೇಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ತನು ಕೊಟ್ಟಿಗೆಹಾರ,ವರದಿಗಾರರು.


0 Comments