ಶರನ್ನವರಾತ್ರಿಯ ಪ್ರಾರಂಭದ ದಿನವಾದ ಇಂದು ಶ್ರೀವಿದ್ಯಾಂಬಿಕ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ.
ಶತಚಂಡಿಯಾಗದ ಸಪ್ತಶತಿ ಪಾರಾಯಣವೂ ಸಹ ಶ್ರೀ ಮಠದಲ್ಲಿ ಇಂದು ಆರಂಭಗೊಂಡಿದೆ. ಇಂದಿನ ಈ ವಿಶೇಷ ಸಂದರ್ಭದಲ್ಲಿ ಹಲವಾರು ಭಕ್ತರು ಶ್ರೀ ಜಗದ್ಗುರುಗಳ ದರ್ಶನ ಹಾಗೂ ಅಮ್ಮನವರ ದರ್ಶನವನ್ನು ಪಡೆದರು.
ಹಲವಾರು ವರ್ಷಗಳ ಪ್ರಸಿದ್ಧಿ ಇರುವ ಶ್ರೀಮಠದಲ್ಲಿ ಇಂದಿನಿಂದ ಅನೇಕ ವಿಶೇಷ ಕಾರ್ಯಕ್ರಮಗಳು ನಿಯೋಜನೆಗೊಂಡಿದೆ. ಇಂದು ಬೆಳಗ್ಗೆ ಗಣಪತಿಯ ಪೂಜೆ ಭಕ್ತಿಭಾವದಿಂದ ನೆರವೇರಿದ್ದು ಬೆಳಗ್ಗೆಯೇ ನವರಾತ್ರಿಯ ಕುಡಿದಾದ ಸಂಕಲ್ಪವು ಸಹ ನಡೆದಿದೆ ಮತ್ತು ಆರಂಭ ದಿನವಾದ ಇಂದು ದುರ್ಗಾ ಪೂಜೆಯು ಕೂಡ ಕ್ಷೇತ್ರದಲ್ಲಿ ನೆರವೇರಿದೆ.

0 Comments