ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಶ್ವಕರ್ಮ ಸಭಾಭವನದಲ್ಲಿ  ಶೃಂಗೇರಿ ಕ್ಷೇತ್ರ ಮಟ್ಟದ ವಿಶ್ವಕರ್ಮ ಒಕ್ಕೂಟ ಆಯೋಜನೆಯ ಸಲುವಾಗಿ ಪೂರ್ವಭಾವಿ ಸಭೆ ನಡೆಯಿತು.

ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನ ವಿಶ್ವಕರ್ಮ ಸಂಘ ಹಾಗೂ ಮಹಿಳಾ ಮಂಡಳಿ ಪದಾಧಿಕಾರಿ ಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಡಾ. ಕೆ. ಎಸ್ ವೆಂಕಪ್ಪಾಚಾರ್ ವಹಿಸಿ ಕೊಂಡಿದ್ದರು.  ಸಭೆಯ ಕುರಿತಾಗಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದವರು ಪ್ರಜ್ಞಾವಂತರು, ಕ್ರಿಯಾಶೀಲರು ಹಾಗೂ ಕೌಶಲ್ಯ ವಂತರು. ಸಮಾಜವು ವಿಶ್ವಕರ್ಮರ ನ್ನೆ ಅವಲಂಬಿತವಾಗಿದೆ, ಆದರೆ ನಾವುಗಳು ಎಲ್ಲರಂತೆ ಸಮಾಜದಲ್ಲಿ ಬದುಕಬೇಕಾದರೆ ಮೊದಲು ಒಗ್ಗಟ್ಟಾಗಿ ಇರಬೇಕು ಎಂದರು.  ಪ್ರಪಂಚದ ಅತೀ ಸಣ್ಣ ರಾಷ್ಟ್ರಗಳು ತಮ್ಮ ಛಾಪನ್ನು ಮೂಡಿಸುತ್ತಿದೆ ಆದರೆ ಅದರ ಹಿಂದೆ ನಿಂತಿರುವುದು ಒಗ್ಗಟ್ಟು ಆದ ಕಾರಣ ನಾವುಗಳು ಸಹ ಜಾಗೃತರಾಗಿ ಸಂಘಟಿತರಾಗಿ ಸಮಾಜದೊಂದಿಗೆ ಸಾಗಬೇಕಿದೆ ಎಂದರು. 

ಒಂದು ಕಟ್ಟಿಗೆಯನ್ನು ಮುರಿಯಬಹುದು ಆದರೆ ಕಟ್ಟಿಗೆಯ ಹೊರೆಯನ್ನು ಮುರಿಯಲು ಅಸಾಧ್ಯ ಅದೇ ರೀತಿ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಿದರೆ ಸಮಾಜದಲ್ಲಿ ನಮ್ಮನ್ನು ಬೇರ್ಪಡಿಸಲು ಯಾವುದೇ ದುಷ್ಟಶಕ್ತಿಗಳಿಂದ ಸಾಧ್ಯವಿಲ್ಲ. ಮಹೇಶ್ ಆಚಾರ್ಯ. ಅಧ್ಯಕ್ಷರು ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಆಚಾರ್ಯ, ಗುಣವಂತಿಯ ಶ್ರೀ ಸುಬ್ರಮಣ್ಯ ಆಚಾರ್ಯ, ಬಾಳೆಹೊನ್ನೂರಿನ ಶ್ರೀ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.