ತೀರ್ಥಹಳ್ಳಿ :(ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹರಿಯುವ ತುಂಗಾ ನದಿಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದೆ.

ತೀರ್ಥಹಳ್ಳಿಯ ತುಂಗಾನದಿ ನೀರಿನಲ್ಲಿ ಶವವೊಂದು ತೇಲುತ್ತಾ ಇರುವುದು ಕಂಡು ಬಂದಿತ್ತು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ನೀರಿಗೆ ಇಳಿದು ತಮ್ಮ ಕಾರ್ಯಾಚರಣೆಯನ್ನು ನಡೆಸಿ ನೀರಿನಿಂದ ಮೇಲಕ್ಕೆ ಶವವನ್ನು ತೆಗೆದಿದ್ದಾರೆ. 

ನಂತರದಲ್ಲಿ ಮೃತರು ಬೆಟ್ಟಮಕ್ಕಿ ಗ್ರಾಮದ ರುದ್ರಮ್ಮ ಎಂದು ತಿಳಿದುಬಂದಿದೆ. ಅವರ ಸಾವಿನ ಕುರಿತಾದ ಮಾಹಿತಿಗಳು ತನಿಖೆಯ ನಂತರದಲ್ಲಷ್ಟೇ ತಿಳಿಯಬೇಕಿದೆ.