ಕೊಪ್ಪ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಹರಿಹರಪುರ ಶ್ರೀ ಸ್ವಯಂ ಪ್ರಕಾಶ ಸರಸ್ವತಿ ಸಚ್ಚಿದಾನಂದ ಮಹಾ ಸ್ವಾಮಿಗಳ ಪೂರ್ಣ ಅನುಗ್ರಹದೊಂದಿಗೆ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ನಮ್ಮ ಗ್ರಾಮ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಶ್ರೀ ಸ್ವಯಂ ಪ್ರಕಾಶ ಸರಸ್ವತಿ ಪ್ರೌಢಶಾಲೆ ನಾರ್ವೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬೆಳಿಗ್ಗೆ 8:30 ರಿಂದ ಸಂಜೆ 4:30 ರವರೆಗೆ ನಡೆದ ಶಿಬಿರದಲ್ಲಿ ಬೆಂಗಳೂರಿನ ಪ್ರಸಿದ್ಧ ವೈದ್ಯ ಡಾ. ಶ್ರೀಧರ್ ಮತ್ತು ತಂಡ ಹೃದಯ( ಇ,ಸಿ,ಜಿ)  ,ರಕ್ತದೊತ್ತಡ(ಬಿ,ಪಿ),ಕೊಲೆಸ್ಟ್ರಾಲ್(ಕೊಬ್ಬು) ,ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಪರೀಕ್ಷೆಯ ಮಾಡುವ ಮೂಲಕ 180 ಕ್ಕೂ ಅಧಿಕ ಜನರ ಅರೋಗ್ಯ ತಪಾಸಣೆ ನಡೆಸಲಾಯಿತು.

ಸನಾತನ ಹಿಂದೂ ಸಮಾಜ ಪರಿಷತ್ ರಾಜ್ಯ ಸಂಚಾಲಕ್ ಸತ್ಯನಾರಾಯಣ್ .ಮಲೆನಾಡು ಸಂಚಾಲಕ್ ವಾಸಪ್ಪ ಕುಂಚೂರು, ತಾಲ್ಲೂಕು ಸಂಚಾಲಕ್ ಚೇತನ್ ಕುದುರೆಗುಂಡಿ,ಹಾಗೂ ಗ್ರಾಮ ಸಂಚಾಲಕ್ ಅನಿಲ್ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಹರೀಶ್ ನಾರ್ವೆ.