ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಮೈಸೂರಿನ ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಚಿಕ್ಕಮಗಳೂರು ತಾಲೂಕಿನ ಬಿಂಡಿಗಾ ದೇವಿರಮ್ಮ ದೇವಿಯ ದರ್ಶನ ಪಡೆದರು.

ಬಹಳ ಪ್ರಾಮುಖ್ಯತೆ ಹೊಂದಿರುವ ದೇವಿರಮ್ಮ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದ ಅವರು ಶಕ್ತಿಯುತ ದೇವಾಲಯವಾದ ಶ್ರೀ ದೇವೀರಮ್ಮ ದೇಗುಲದ ದರ್ಶನ ಮಾಡಿರುವುದು ಮನಸ್ಸಿಗೆ ಸಂತಸ ತಂದಿದೆ, ಅಪಾರ ಭಕ್ತಿ ಭಾವಗಳಿಂದ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ತಾಯಿಯು ಸರ್ವರಿಗೂ ಒಳಿತನ್ನು ಉಂಟುಮಾಡಲಿ ಎಂದರು.

ನಾಡಿನ ಸಮಸ್ತರ ಮೇಲೂ ತಾಯಿಯ ಆಶೀರ್ವಾದ ಇರಲಿ ಹಾಗೂ ಮುಂದಿನ ದಿನಗಳಲ್ಲಿ ದೇಶವು ಸುಭೀಕ್ಷವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ದೇವಿರಮ್ಮ ದೇವಿಯ ದರ್ಶನ ಆರಂಭವಾದ ದಿನದಿಂದ ಹಲವಾರು ಗಣ್ಯರು ದೇವಾಲಯದ ದರ್ಶನಕ್ಕೆಂದು ವಿವಿಧ ಕಡೆಗಳಿಂದ ಆಗಮಿಸುತ್ತಿದ್ದಾರೆ.