ಚಿಕ್ಕಮಗಳೂರು : ಪುಟ್ಟ ಮಗುವೊಂದರ ಕೈಗೆ ಬೀಡಿಯನ್ನು ಸೇದಲು ಕೊಟ್ಟು ಮೂಗಿನಲ್ಲಿ ಹೊಗೆ ಬಿಡು ಎಂದು ಆಕೆಯ ತಂದೆಯೇ ಪ್ರೋತ್ಸಾಹಿಸಿದ ಕೆಟ್ಟ ಘಟನೆಯೊಂದು ಮೂಡಿಗೆರೆಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿ ಇಲ್ಲದೆ ಹಲವಾರು ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಲುವಾಗಿ ಕೆಟ್ಟ ಚಟಗಳಿಗೆ ಬಲಿಯಾಗದಂತೆ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರೂ ಕೂಡ ಈ ರೀತಿಯ ಘಟನೆಗಳು ಬಾಲ್ಯದಲ್ಲೇ ಮಕ್ಕಳ ಮನಸನ್ನು ದುರ್ಬಲಗೊಳಿಸುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಸಮೀಪದ ಜಾಣಿಗಿ ಗ್ರಾಮದಲ್ಲಿ ತಂದೆಯೇ ತನ್ನ ಪುಟ್ಟ ಮಗಳಿಗೆ ಬೀಡಿ ಸೇದಲು ಪ್ರೇರೇಪಿಸುವ ಘಟನೆ ಬೆಳಕಿಗೆ ಬಂದಿದೆ. ಸಣ್ಣ ಮಕ್ಕಳ ಮುಂದೆ ಧೂಮಪಾನ ಮಧ್ಯಪಾನ ಮಾಡುವುದೇ ತಪ್ಪು ಅಂತಹುದರಲ್ಲಿ ತಂದೆಯು ತನ್ನ ಮಗಳಿಗೆ ಬೀಡಿ ಸೇದಲು ಹೇಳಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ತಮಾಷೆ ಮಾಡಲು ಹೋಗಿಯೋ ಅಥವಾ ಇನ್ಯವುದಕ್ಕೊ ಮಕ್ಕಳ ಬಳಿ ಈ ರೀತಿಯಾದ ಕೆಟ್ಟ ಕೆಲಸಗಳನ್ನು ಮಾಡಿಸುವುದು ಸರಿಯಲ್ಲ. ಈ ಕೆಟ್ಟ ಕೆಲಸವನ್ನು ಮಾಡಿಸಿದವರು ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮುಂದಿನ ದಿನಗಳಲ್ಲಿ ಈ ರೀತಿಯ ಕೆಲಸ ಮಾಡಿಸುವವರು ಕಾನೂನಿಗೆ ಹೆದರಬೇಕು ಎಂದು ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments