ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಹಾಗೂ ಪವಿತ್ರ ಕ್ಷೇತ್ರವಾದ ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ  ಶ್ರೀ ರಾಮ ಸೇನೆಯ ಕಾರ್ಯಕರ್ತರು ಹಾಗೂ ಮುಖಂಡರುಗಳು ದತ್ತ ಮಾಲೆಯನ್ನು ಧರಿಸಿ  ಆಗಮಿಸುತ್ತಿರುವ ಕಾರಣ ದಿನಾಂಕ 14.11.2021 ರಂದು ಪ್ರವಾಸಿಗರಿಗೆ ದತ್ತ ಪೀಠ ಪ್ರವೇಶವನ್ನು  ನಿಷೇಧಿಸಲಾಗಿದೆ.

ಬೆಳಗ್ಗೆ 06 ರಿಂದ ಸಂಜೆ 06 ರ ವರೆಗೆ ಪ್ರವಾಸಿಗರಿಗೆ ದತ್ತಪೀಠ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದನ್ನು ಹೊರತುಪಡಿಸಿ ಭಾರೀ ವಾಹನಗಳಿಗೆ ಮತ್ತು ಲಾಂಗ್ ಚಾಸಿಸ್ ವಾಹನಗಳ ಸಂಚಾರಕ್ಕೂ ನಿರ್ಭಂದ ಹೇರಲಾಗಿದೆ. 

ಕಡಿದಾದ  ಗಿರಿ ಶ್ರೇಣಿಗಳ  ಮಧ್ಯ ಭಾಗದಲ್ಲಿರುವ ಪಾದುಕೆಗಳ ದರ್ಶನವನ್ನು ಪಡೆಯಲು ರಾಜ್ಯದ ಹಲವು ಭಾಗಗಳಿಂದ ಮಾಲಾಧಾರಿಗಳು  ಆಗಮಿಸುವ ಸಲುವಾಗಿ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿದೆ.