ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಬಜರಂಗದಳದ ಕಾರ್ಯಕರ್ತರು ಇಂದು ಬಲಿದಾನ ದಿವಸದ ಅಂಗವಾಗಿ ರಕ್ತದಾನ ಶಿಬಿರವನ್ನು ನಡೆಸಿದರು.

ಚಿಕ್ಕಮಗಳೂರು ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಇಂದು ಬಜರಂಗದಳದ ಹಲವಾರು ಕಾರ್ಯಕರ್ತರು ರಕ್ತದಾನ ಮಾಡಿದರು. ಕೊರೋನ ಸಂದರ್ಭದ ನಂತರದಲ್ಲಿ ರಕ್ತದ ಅಭಾವ ಹೆಚ್ಚಾಗುತ್ತಲೇ ಇದೆ ಆದಕಾರಣ ರಕ್ತದಾನಕ್ಕೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕು ಎಂದು ವೈದ್ಯರು ತಿಳಿಸಿದರು.

ಕೊಠಾರಿ ಸಹೋದರರು ರಾಮ ಮಂದಿರಕ್ಕಾಗಿ ಕರ ಸೇವೆ ಮಾಡುವ ಸಂದರ್ಭದಲ್ಲಿ ಪ್ರಾಣಾರ್ಪಣೆ ಮಾಡಿದ ದಿನವನ್ನು ಬಜರಂಗದಳವು ಬಲಿದಾನ ದಿನವೆಂದು ಆಚರಣೆ ಮಾಡುತ್ತಾ ಬಂದಿದೆ. ಈ ಬಾರಿ ಕೂಡ ರಕ್ತದಾನ ಮಾಡುವ ಮೂಲಕ ಬಲಿದಾನ ದಿನವನ್ನು ಪುನಃ ಸ್ಮರಿಸಿದ್ದೇವೆ, ಮಂದಿರಕ್ಕಾಗಿ ಹೋರಾಡಿದ ಎಲ್ಲರ ತ್ಯಾಗ ಅಪಾರ ಎಂದು ಬಜರಂಗದಳದ ನಗರ ಸಂಯೋಜಕ ಶ್ಯಾಮ್ ವಿ ಗೌಡ ಮಾತನಾಡಿದರು.

ಈ ರಕ್ತದಾನ ಶಿಬಿರದಲ್ಲಿ ಬಜರಂಗದಳದ ಕಾರ್ಯಕರ್ತರಾದ ಧ್ರುವ,ಗಣೇಶ್ ಗುರು,ನವೀನ್ ಹಾಗೂ ಇನ್ನೂ ಹಲವಾರು ಜನ ಕಾರ್ಯಕರ್ತರು ಹಾಜರಿದ್ದರು.