ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಹೆಚ್. ಎಲ್ ನಾಗರಾಜ್ ಅವರಿಗೆ ಮಂಗಳೂರಿನ ಅಪರ ಜಿಲ್ಲಾಧಿಕಾರಿಯಾಗಿ ಬಡ್ತಿ ಹೊಂದಿದ್ದಾರೆ. ಬಡ್ತಿ ಹೊಂದಿದ್ದಕ್ಕೆ ಖುಷಿ ಇದ್ದರೂ ಕೂಡ ಜಿಲ್ಲೆಯ ಜನತೆಗೆ ಒಬ್ಬ ಉತ್ತಮ ಜನಸ್ನೇಹಿ ಅಧಿಕಾರಿಯನ್ನು ಕಳೆದುಕೊಂಡ ನೋವು ಎಲ್ಲರಲ್ಲೂ ಭಾದಿಸುತ್ತಿದೆ.
ಜಿಲ್ಲೆಯಾದ್ಯಂತ ಪ್ರತಿಯೊಂದು ಕೆಲಸಗಳಲ್ಲಿಯೂ ಕೂಡ ಉತ್ತಮವಾಗಿ ಸ್ಪಂದಿಸಿ, ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಡಾ. ನಾಗರಾಜ್ ಅವರ ಬಡ್ತಿಯು ಜನರಿಗೆ ಒಂದು ಕಡೆ ಖುಷಿ ನೀಡಿದೆ ಇನ್ನೊಂದೆಡೆ ಬೇಸರ ತರಿಸಿದೆ.
ಅತಿಹೆಚ್ಚು ಎಸಿ ಕೋರ್ಟ್ ನ ವ್ಯಾಜ್ಯಗಳನ್ನು ಬಗೆಹರಿಸಿ ರಾಜ್ಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದ ಅವರು, ಜಿಲ್ಲೆಯಲ್ಲಿ ಕೆರೆ ರಕ್ಷಣೆ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಜನರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೆ ಸಮಯವನ್ನು ಲೆಕ್ಕಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಒಬ್ಬ ಉತ್ತಮ ಅಧಿಕಾರಿಯನ್ನು ಜಿಲ್ಲೆಯು ಕಳೆದುಕೊಂಡಿದೆ ಎಂದು ಸಾರ್ವಜನಿಕರು ಡಾ. ನಾಗರಾಜ್ ಅವರಿಂದ ಸಮಾಜಕ್ಕಾದ ಉತ್ತಮ ಕಾರ್ಯಗಳನ್ನು ನೆನೆಯುತ್ತಿದ್ದಾರೆ. ಸಾರ್ವಜನಿಕರಲ್ಲಿ ಡಾ.ನಾಗರಾಜ್ ಅವರು ಬಡ್ತಿ ಹೊಂದಿದ ಖುಷಿಯು ಒಂದೆಡೆ ಇದ್ದರೆ ಇನ್ನೊಂದೆಡೆ ಜಿಲ್ಲೆಯನ್ನು ಬಿಟ್ಟು ಬೇರೆಡೆಗೆ ವರ್ಗವಾಗಿರುವುದು ಬೇಸರ ಉಂಟುಮಾಡಿದೆ.

0 Comments