ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರವಾದ ಮಳೆ ಉಂಟಾಗಿದ್ದು, ಬೆಳೆದ ಬೆಳೆಯು ರೈತರ ಕೈ ತಲುಪುವ ಸಮಯದಲ್ಲಿ ಸಂಪೂರ್ಣವಾಗಿ ನಾಶಗೊಂಡಿದೆ. ಆದಷ್ಟು ಶೀಘ್ರವಾಗಿ ರೈತರು ಬೆಳೆದು ನಾಶವಾದ ಬೆಳೆಗಳ ಹಣವನ್ನು ಸರ್ಕಾರ ಕೂಡಲೇ ರೈತರಿಗೆ ನೀಡಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳ ಅಕಾಲಿಕ ಮಳೆಗೆ ರೈತರ ಬದುಕು ಸಂಪೂರ್ಣ ದುಸ್ತರವಾಗಿದ್ದು ಈ ಕುರಿತಾಗಿ ಸರಕಾರ ಹಾಗೂ ಅಧಿಕಾರಿಗಳು ಗಮನವಹಿಸಿ ಸಮರ್ಪಕವಾದ ಪರಿಹಾರವನ್ನು ರೈತರಿಗೆ ಕೂಡಲೇ ನೀಡಬೇಕು ಹಾಗೂ ನಾಶ ಹೊಂದಿದ ಬೆಳೆಗಳ ಸಮೀಕ್ಷೆ ನಡೆಸಿ ರೈತರ ಬಾಳಿಗೆ ಆಶಾಕಿರಣವಾಗಬೇಕೆಂಬ ಆಗ್ರಹ ಮಾಡಿದ್ದಾರೆ.
ಇದಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಅವಘಡಗಳು ಸಂಬಂಧಿಸಿದ್ದು ಆ ಕುರಿತಾಗಿ ಗಮನಹರಿಸಿ, ಆದ್ಯತೆಯ ಮೇರೆಗೆ ರೈತರು ಹೊಂದಿದ ಬೆಳೆ ನಾಶವನ್ನು ಪರಿಹರಿಸಬೇಕೆಂದು ಸರ್ಕಾರವನ್ನು ಮನವಿ ಮಾಡಿದ್ದಾರೆ.

0 Comments