ಚಿಕ್ಕಮಗಳೂರು : ಮಲೆನಾಡಿನಲ್ಲಿ ಮತ್ತೆ ಹುಲಿ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ, ಹುಲಿ ದಾಳಿಗೆ ಹಸುವಿನ ಕರುವೊಂದು ಬಲಿಯಾದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಇದ್ದ ಕರುವನ್ನು ಹುಲಿ ತಿಂದಿದೆ. ರತ್ನಮ್ಮ ಎಂಬುವವರಿಗೆ ಸೇರಿದ್ದ ಹಸುವಿನ ಕರು ಇದಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದಿನ ದಿನಗಳಲ್ಲಿ ಬಿ ಹೊಸಳ್ಳಿ, ಭಾರತಿ ಬೈಲ್, ಹೊಕ್ಕಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆಗಳು ಬೆಳಕಿಗೆ ಬಂದಿತ್ತು.
ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ಪಶುಗಳನ್ನು ಸಾಕಿರುವವರು ಬಹಳ ಆತಂಕದಲ್ಲಿದ್ದಾರೆ. ತಮ್ಮ ಮನೆಯ ದನಕರುಗಳನ್ನು ಹೇಗೆ ರಕ್ಷಿಸುವುದು ಎಂಬ ಯೋಚನೆಯಲ್ಲಿ ದಿನ ಕಳೆಯುವಂತಾಗುತ್ತಿದೆ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ಗಳಾದ ಉಮೇಶ್ ಮತ್ತು ಅರಣ್ಯ ರಕ್ಷಕ ಮೋಹಸಿನ್ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

1 Comments
ಆದಷ್ಟು ಬೇಗ ಇದಕ್ಕೆ ಒಂದು ಪರಿಯರ ಮಾಡಿ ಕೊಡಿ
ReplyDelete