ಹಾಸನ:(ನ್ಯೂಸ್ ಮಲ್ನಾಡ್ ವರದಿ) ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಗಲುವಿಕೆಯ ನೋವು ಇನ್ನೂ ಜನರ ಮನಸ್ಸಿನಿಂದ ದೂರ ಸರಿದಿಲ್ಲ. ಅಪ್ಪು ಸಾವನ್ನಪ್ಪಿ 25 ದಿನಗಳು ಕಳೆದ ನಂತರವೂ ರಾಜ್ಯದಲ್ಲಿ ಅಭಿಮಾನಿಗಳು ಬೇಸರವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಹಾಸನದ ಪಟ್ಟಣದ ನಿವಾಸಿ ಮಯೂರ ಎಂಬುವವರು ಅಪ್ಪುವಿನ ಮರಣದಿಂದ ಬಹಳ ದುಃಖಕ್ಕೀಡಾಗಿದ್ದರು.ಅಪ್ಪುವಿನ ಸಾವಿನ ನಂತರದ ದಿನಗಳಲ್ಲಿ ಬಹಳ ಬೇಸರದಿಂದಿದ್ದ ಅವರು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಯೂರ ಅವರು ಪುನೀತ್ ರಾಜ್ ಕುಮಾರ್ ಅವರ ಬಹಳ ದೊಡ್ಡ ಅಭಿಮಾನಿಯಾಗಿದ್ದರು. ಅವರ ಸಾವು ಅತೀವವಾದ ನೋವನ್ನು ಮಯೂರ ಅವರಿಗೆ ತಂದೊದಗಿಸಿತ್ತು.
ಅಪ್ಪು ಅವರನ್ನು ಅತೀವವಾಗಿ ಹಚ್ಚಿಕೊಂಡಿದ್ದ ಮಯೂರ ಅವರು ಹಲವಾರು ಬಾರಿ ಅಪ್ಪು ಅವರನ್ನು ಭೇಟಿಯಾಗಿದ್ದರು. ನಿನ್ನೆ ದುಃಖ ತಡೆಯಲಾರದೆ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments