ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಯುವ ಪ್ರತಿಭೆಗಳಿಗೆ ಸಂದ ಬೆಸ್ಟ್ ಎಕ್ಸ್ಪರಿಮೆಂಟಲ್ ಶಾರ್ಟ್ ಫಿಲಂ ಅವಾರ್ಡ್ ದೊರಕಿದೆ.
ಇಂಡಿಯನ್ ಫಿಲ್ಮ್ ಹೌಸ್ ಸಂಸ್ಥೆಯು ನಡೆಸಿದ ಉತ್ತಮ ರಾಷ್ಟ್ರೀಯ ಕಿರುಚಿತ್ರಗಳ ಸ್ಪರ್ಧೆಯಲ್ಲಿ ಕೊಪ್ಪದ ಪ್ರತಿಭಾನ್ವಿತ ಯುವ ಸಮೂಹದ ತಂಡವು ಪ್ರಶಸ್ತಿಗಳಿಸಿದೆ. ಪಗ್ ಜಿ ಎಂಬ ಕಿರು ಚಿತ್ರವನ್ನು ಲಾಕ್ ಡೌನ್ ಸಂದರ್ಭದಲ್ಲಿ ನಿರ್ಮಾಣ ಮಾಡಿ ತಮ್ಮಲ್ಲೇ ಇದ್ದ ಕಲೆಯನ್ನು ಅನಾವರಣಗೊಳಿಸಿ ಉತ್ತಮವಾಗಿ ಸಂಪೂರ್ಣ ಚಿತ್ರವನ್ನು ನಿಭಾಯಿಸಿದ ಕೀರ್ತಿ ಇಡೀ ಚಿತ್ರತಂಡಕ್ಕೆ ಸಲ್ಲುತ್ತದೆ. ಕಾಲೇಜು ವಿದ್ಯಾರ್ಥಿಗಳ ತಂಡವು ಈ ಚಿತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.
ಪಗ್ ಜಿ ಎಂಬ ಕಿರುಚಿತ್ರವು ಬೀದಿ ನಾಯಿಗಳ ಕುರಿತಾಗಿದೆ. ಬೀದಿ ನಾಯಿಗಳನ್ನು ಪ್ರೀತಿಯಿಂದ ಕಾಣುವಂತೆ ಹಾಗೂ ಅದರ ಆರೈಕೆಯನ್ನು ಮುಖ್ಯವಾಗಿ ಮಾಡಬೇಕು. ಮನುಷ್ಯರಿಗಿಂತ ನಾಯಿಯು ನಿಯತ್ತಿನ ಪ್ರಾಣಿ ಎಂದು ಸಾರುವ ಕಿರುಚಿತ್ರ ಇದಾಗಿದೆ.
ಕನ್ನಡ, ತಮಿಳು, ಹಿಂದಿ ,ತೆಲುಗು ಭಾಷೆಗಳ 1800 ಕ್ಕೂ ಅಧಿಕ ಕಿರುಚಿತ್ರಗಳಲ್ಲಿ ಈ ಚಿತ್ರವು ಪ್ರಶಸ್ತಿ ಪಡೆದಿರುವುದು ಮಲೆನಾಡಿಗೆ ಹಾಗೂ ಮಲೆನಾಡಿಗರಿಗೆ ಹೆಮ್ಮೆ ತಂದಿದೆ. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರ ತಂಡದ ಅಭಿಜ್ಞಾನ್ ಕೆ, ರೋಹನ್ ಶೆಟ್ಟಿ, ಪ್ರವೀಣ್ ಎಮ್ ನಾಯಕ್, ನಾಗರಾಜ್ ರವಿ ಹೆಗ್ಡೆ ಭಾಗವಹಿಸಿದ್ದರು.

0 Comments