ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಸರ್ಕಾರ ಉತ್ತಮವಾದ ಕೊಡುಗೆ ನೀಡಿದೆ.
ಈ ಹಿಂದೆ ಸರ್ಕಾರವು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಡಾ. ಹೆಚ್. ಎಲ್ ನಾಗರಾಜ್ ಅವರನ್ನು ಮಂಗಳೂರಿನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ದಂಡಾಧಿಕಾರಿಯಾಗಿ ನೇಮಕಗೊಳಿಸಿತ್ತು. ಇದಕ್ಕೆ ಜಿಲ್ಲೆಯ ಸಾರ್ವಜನಿಕರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದರು. ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತಿದ್ದೇವೆ ಎಂದು ಜಿಲ್ಲೆಯ ಜನರು ಬಹಳ ನೊಂದಿದ್ದರು.
ಆದರೆ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಈಗ ಸಿಹಿ ಸುದ್ದಿಯೊಂದು ದೊರೆತಿದೆ. ರಾಜ್ಯಪಾಲರ ಆದೇಶದ ಅನುಸಾರವಾಗಿ ಈ ಹಿಂದಿನ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂಬ ಸುತ್ತೋಲೆಯನ್ನು ಹೊರಡಿಸಿದೆ. ಸಾರ್ವಜನಿಕರಲ್ಲಿ ಈ ಬೆಳವಣಿಗೆಯು ಬಹಳ ಸಂತಸ ತಂದಿದೆ. ತಮ್ಮ ನೆಚ್ಚಿನ ಅಧಿಕಾರಿಯನ್ನು ಮರಳಿ ಪಡೆದ ಜನರು ಇವರಿಂದ ಜಿಲ್ಲೆಗೆ ಇನ್ನೂ ಅನೇಕ ಉತ್ತಮ ಕೆಲಸಗಳು ಆಗಲಿದೆ ಎಂಬ ಆಶಾ ಭಾವನೆಗಳನ್ನು ಹೊರಹಾಕಿದ್ದಾರೆ.

0 Comments