ಚಿಕ್ಕಮಗಳೂರು : ಕಾಫಿ ನಾಡಿನಲ್ಲೊಂದು ಭೀಕರ ಘಟನೆ. ಬೆಳ್ಳಂಬೆಳಗ್ಗೆ ಯುವಕನನ್ನು ಕೊಲೆಗೈದ ಹಂತಕರು.
ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದ ಪ್ರಕ್ರುತ್ ಎಂಬ ಯುವಕನನ್ನು ಪಾಪಿಗಳು ಕೊಲೆಗೈದಿದ್ದಾರೆ. ತೋಟಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆಗೈಯಲಾಗಿದೆ. ಪ್ರಕ್ರುತ್ ಕಾಫಿ ತೋಟಕ್ಕೆ ಹೋಗಿ ಹಿಂದಿರುಗುವಾಗ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕ್ರುತ್ ಪೋಷಕರ ಅಕ್ರಂದನವು ಮುಗಿಲು ಮುಟ್ಟಿದೆ, ಮಗನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವರ್ಗವೇ ಕಣ್ಣೀರಿನಲ್ಲಿ ಮಡುಗಟ್ಟಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅಕ್ಷಯ್ ಹಾಕೆ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments