ಕಳಸ :(ನ್ಯೂಸ್ ಮಲ್ನಾಡ್ ವರದಿ) ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಆಟೋ ಚಾಲಕರು ಬೀದಿಗಿಳಿದ ಘಟನೆ ಕಳಸದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಇಡಕಿಣಿ ಗ್ರಾಮದಲ್ಲಿ ಕುದುರೆಮುಖದ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎನ್ ರಮೇಶ್ ಅವರ ವಿರುದ್ಧ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 25 ವರ್ಷಗಳಿಂದ  ಆಟೋ ಚಾಲಕರು ತಮ್ಮ ಆಟೋಗಳನ್ನು ನಿಲ್ಲಿಸುತ್ತಿದ್ದ ಸ್ಥಳದಲ್ಲಿಇನ್ನು ಮುಂದಿನ ದಿನಗಳಲ್ಲಿ ಆಟೋ ನಿಲ್ಲಿಸಬಾರದು ಗ್ರಾಮೀಣ ಭಾಗಗಳಲ್ಲಿ ಆಟೋ ನಿಲ್ಲಿಸದೆ ಮುಖ್ಯರಸ್ತೆಗಳಲ್ಲಿ ಆಟೋ ನಿಲ್ಲಿಸುವಂತೆ ಸರ್ಕಲ್ ಇನ್ಸ್ಪೆಕ್ಟರ್ ಆಟೋ ಚಾಲಕರಿಗೆ ತಾಕೀತು ಮಾಡಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸಿದ ಆಟೋವನ್ನು ಜೀವನಕ್ಕೆ ಆಧಾರವಾಗಿ ನಂಬಿರುವ ಆಟೋ ಚಾಲಕರು ಹಾಗೂ ಆಟೋ ಮಾಲೀಕರು ಸರ್ಕಲ್ ಇನ್ಸ್ಪೆಕ್ಟರ್ ಅವರ ವಿರುದ್ಧವಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಕುರಿತಾಗಿ ಪಂಚಾಯಿತಿ ಎದುರುಗಡೆ ಆಟೋಗಳನ್ನು ನಿಲ್ಲಿಸಿ ಎಚ್ಚರಿಸುವ ಸಲುವಾಗಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಶೀಘ್ರವಾಗಿ ಆಟೋಗಳನ್ನು ಈ ಹಿಂದೆ ಆಟೋ ನಿಲುಗಡೆ ಮಾಡುತ್ತಿದ್ದ ಸ್ಥಳದಲ್ಲಿಯೇ ಅವಕಾಶ ನೀಡದೆ ಹೋದಲ್ಲಿ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಹ ಆಟೋ ಚಾಲಕರು ನೀಡಿದ್ದಾರೆ. 

ಘಟನೆಯ ಕುರಿತಾಗಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಗಮನವಹಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಆಟೋ ಚಾಲಕರು ಕೋರಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.