ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶ್ರೀ ಕ್ಷೇತ್ರ ದೇವಿರಮ್ಮ ಬೆಟ್ಟವನ್ನು ಹತ್ತಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ಬಂದವರಿಗೆ ಯಾವುದೇ ರೀತಿಯ ಅನಾನುಕೂಲಗಳು ಉಂಟಾಗದಂತೆ ಆರಕ್ಷಕ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿವರ್ಗ ಬಹಳಷ್ಟು ಶ್ರಮ ವಹಿಸಿದ್ದು ಮೆಚ್ಚುಗೆ ವ್ಯಕ್ತವಾಗಿದೆ
ಪವಿತ್ರ ಕ್ಷೇತ್ರವಾದ ದೇವೀರಮ್ಮ ಬೆಟ್ಟಕ್ಕೆ ಹಲವಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಹಗ್ಗವನ್ನು ಹಿಡಿದುಕೊಂಡು ಹತ್ತಲು ಹಾಗೂ ಇಳಿಯಲು ಸಹಾಯ ಮಾಡುವ ಅವರ ಮನೋಭಾವವನ್ನು ಕಂಡು ಬಂದಿದ್ದ ಭಕ್ತಾದಿಗಳು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೇವೀರಮ್ಮ ಬೆಟ್ಟವನ್ನು ಹತ್ತುವ ಹಾಗೂ ಇಳಿಯುವ ಭಕ್ತರಿಗೆ ಸರಾಗವಾಗಿ ಹತ್ತಿ ಇಳಿದು ಹೋಗಲು ಅನುಕೂಲ ನಿರ್ಮಾಣ ಮಾಡಿಕೊಟ್ಟ ಆನಂದ್ ತರೀಕೆರೆ ಹಾಗೂ ಕಿರಣ್ ಕಡೂರು ಅವರನ್ನು ಬಹಳಷ್ಟು ಜನರು ಶ್ಲಾಘಿಸಿದರು. ಆರಕ್ಷಕ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸದಾಕಾಲ ಬೆಟ್ಟದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಒಂದೆಡೆ ಆನಂದ್ ಅವರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಭಕ್ತಾದಿಗಳು ಹತ್ತಲು ಸಹಾಯ ಮಾಡುತ್ತಿದ್ದರೆ ಇನ್ನೊಂದೆಡೆ ಕಿರಣ್ ಅವರು ಕಾಲು ಹಾಗೂ ಕೈಯಲ್ಲಿ ಹಗ್ಗ ಹಿಡಿದುಕೊಂಡು ಬೆಟ್ಟ ಏರುವವರಿಗೆ ಸಹಾಯ ಮಾಡುತ್ತಿದ್ದರು.
ಸಾರ್ವಜನಿಕರು ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಅಲ್ಲಿರುವ ಎಲ್ಲಾ ಸಿಬ್ಬಂದಿಗಳಿಗೆ ಧನ್ಯವಾದಗಳ ಮಹಾಪೂರವನ್ನೇ ಸಲ್ಲಿಸಿದ್ದಾರೆ.

0 Comments