ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ಪ್ರಸಿದ್ದ ಹುಲಿ - ಸಿಂಹ ಧಾಮವಾದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಹೊಸ ಪ್ರಾಣಿಯ ಆಗಮನವಾಗಿದೆ.

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಪ್ರಸಿದ್ಧ ಹುಲಿ - ಸಿಂಹಧಾಮಕ್ಕೆ  ಆಫ್ರಿಕಾ ಮೂಲದ ನೀರು ಕುದುರೆಯೊಂದು ನೂತನವಾಗಿ ಆಗಮಿಸಿದೆ. ಈ ನೀರು ಕುದುರೆಯನ್ನು  ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ತಂದು ಬಿಡಲಾಗಿದೆ. ಇದರ ಆಯಸ್ಸು ಸುಮಾರು ನಲವತ್ತು ವರ್ಷಗಳೆಂದು  ತಿಳಿದುಬಂದಿದೆ. ಇಷ್ಟು ಸಮಯಗಳ ಕಾಲ ಮೈಸೂರು, ಬನ್ನೇರುಘಟ್ಟದಲ್ಲಿ ಈ ಕುದುರೆಯು ಕಾಣ ಸಿಗುತ್ತಿತ್ತು, ಆದರೆ ಈಗ ಶಿವಮೊಗ್ಗದ ತಾವರೆಕೊಪ್ಪದ ಹುಲಿ - ಸಿಂಹಧಾಮದಲ್ಲಿ ನಾವು ವಿಶಿಷ್ಟ ಪ್ರಾಣಿಯಾದ ನೀರು ಕುದುರೆಯನ್ನು ನೋಡಬಹುದು. ನೀರು ಕುದುರೆಯು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಇರುವುದರಿಂದ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ತಾವರೆಕೊಪ್ಪದ ಹುಲಿ - ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್‌ಚಂದ್‌ ಮಾಹಿತಿ ನೀಡಿದ್ದಾರೆ.

ಈಗ ಗಂಡು ನೀರು ಕುದುರೆ ಸಿಂಹಧಾಮದಲ್ಲಿದ್ದು ಮುಂದಿನ ಕೆಲವು ದಿನಗಳಲ್ಲಿ ಹೆಣ್ಣು ನೀರು ಕುದುರೆಯು ಕೂಡ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗ ಬಂದಿರುವ ನೀರು ಕುದುರೆಯನ್ನು ನೋಡಲು ಹಲವೆಡೆ ಇಂದ ಪ್ರವಾಸಿಗರು ಶಿವಮೊಗ್ಗದ ಸಫಾರಿಗೆ ಆಗಮಿಸುತ್ತಿದ್ದಾರೆ ಎಂದು  ತ್ಯಾವರೇಕೊಪ್ಪ ಲಯನ್ ಸಫಾರಿಯ ಸಿಬ್ಬಂದಿಗಳು  ತಿಳಿಸಿದ್ದಾರೆ.