ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮಹಾನಗರ ಪಾಲಿಕೆಯ ನಿರ್ಲಕ್ಷಕ್ಕೆ ಮೂಕ ಜೀವಿಗಳು ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಅನುಪಿನಕಟ್ಟೆಯಲ್ಲಿ ನಡೆದಿದೆ.

ಕಸವನ್ನು ಸಂಗ್ರಹಣೆ ಮಾಡುವ ಘನ ತ್ಯಾಜ್ಯ ವಿಲೇವಾರಿ ಘಟಕದ ವಾಹನವನ್ನು ಓಡಿಸುವ ಕೆಲ ಚಾಲಕರು, ಡಂಪಿಂಗ್ ಯಾರ್ಡ್ ನಲ್ಲಿ ಕಸವನ್ನು ವಿಲೇವಾರಿ ಮಾಡದೇ ತುಂಗಾ  ಎಡದಂಡೆ ಕಾಲುವೆಯ ಸುತ್ತಲಿನ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಇದರ ಪರಿಣಾಮ ಈ ತ್ಯಾಜ್ಯವನ್ನು ತಿಂದು ಐದು ಹಸುಗಳು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಒಂದೆಡೆ ಮೂಕಜೀವಿಗಳ ರಕ್ಷಣೆಗಾಗಿ ಸರ್ಕಾರವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಜಾನುವಾರುಗಳ ಸಾವಿಗೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಕಾರಣೀಕರ್ತರಾಗಿದ್ದಾರೆ.

ಸ್ಥಳೀಯರಿಂದ ಆಕ್ರೋಶ :

ಘಟನೆಯ ಕುರಿತಾಗಿ ಅನುಪಿನಕಟ್ಟೆಯ ನಿವಾಸಿಗಳು ಹಾಗೂ ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಹಾನಗರ ಪಾಲಿಕೆಯು ಈ ಕುರಿತು ಶೀಘ್ರವಾಗಿ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.