ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೆರೆಗೆ ವಿಷಹಾಕಿ ಮೀನುಗಳ ಮಾರಣ ಹೋಮ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಗೆ ಸೇರಿದ ಹುಣಿಸೇಹಳ್ಳಿ ಕೆರೆಗೆ ಆರೋಪಿಗಳು ವಿಷಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ನಡೆಸಿದ್ದಾರೆ. ಈ ಕೆರೆಯನ್ನು ಮದನ್ ಶೇಖರ್ ಎಂಬುವವರು ಕಳೆದ ಮೂರು ವರ್ಷಗಳಿಂದ ಗುತ್ತಿಗೆಗೆ ಪಡೆದು ಮೀನುಗಾರಿಕೆಯನ್ನೆ  ಜೀವನಕ್ಕಾಗಿ ಅವಲಂಬಿಸಿಕೊಂಡು ಜೀವನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆಗೆ ವಿಮೆ ಆಗಿಲ್ಲ :

ಈ ಹಿಂದೆಯೇ ಕೆರೆಗೆ ವಿಮೆ ಮಾಡುವ ಕುರಿತು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಕೂಡ ಅಧಿಕಾರಿಗಳು ಸೂಕ್ತವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಆದ ಕಾರಣ ಅಧಿಕಾರಿಗಳೇ ನನಗೆ ಉಂಟಾಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ಕೆರೆಯ ಗುತ್ತಿಗೆದಾರರಾದ ಮದನ್ ಶೇಖರ್ ಆಗ್ರಹಿಸಿದ್ದಾರೆ.

ಈ ಕೆರೆಯನ್ನು ಹಲವು ಪ್ರಾಣಿಗಳು ಅವಲಂಬಿಸಿಕೊಂಡಿದೆ ಪ್ರತಿನಿತ್ಯ ಸಾವಿರಾರು ಮೀನುಗಳು ಸಾಯುತ್ತಿರುವ ಕಾರಣ ಕೆರೆಯ ಸುತ್ತಮುತ್ತ ವಾಸನೆ ಹೆಚ್ಚಾಗಬಹುದು ಹಾಗೂ ಸ್ಥಳೀಯರ ಆರೋಗ್ಯದಲ್ಲಿ ವ್ಯತ್ಯಯವಾಗುವ ಸಂಭವಗಳು ಹೆಚ್ಚಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೃಪೆ : ಪಿತಾಮಹ ಧೈನಿಕ