ನರಸಿಂಹರಾಜಪುರ :(ನ್ಯೂಸ್ ಮಲ್ನಾಡ್ ವರದಿ) ಹಲವಾರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಒಂದನ್ನು ನರಸಿಂಹರಾಜಪುರ ಪೊಲೀಸರು ಬಂಧಿಸಿದ್ದಾರೆ. 

ಹಲವಾರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಒಂದನ್ನು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳರು ಮಲೆನಾಡು ಭಾಗಗಳಲ್ಲಿ ಬ್ಯಾಂಕ್ ದರೋಡೆ, ಅಂಗಡಿ ಕಳವು, ಅಂಚೆ ಕಛೇರಿ ಕಳವು, ಎಟಿಎಂ ಮಿಷೀನ್ ಒಡೆಯಲು ಯತ್ನ, ದೇವಾಲಯದಲ್ಲಿ ಸೀರೆ ಕಳವು, ದಿನಸಿ ಅಂಗಡಿ ಕಳ್ಳತನ, ಬೈಕ್ ಕಳ್ಳತನ, ಔಷಧದ ಅಂಗಡಿಯಲ್ಲಿ ಕಳ್ಳತನಕ್ಕೆ ಸಂಬಂಧ ಪಟ್ಟಂತೆ ಹಲವಾರು ದುಷ್ಕೃತ್ಯಗಳನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ. 

ಬಹಳಷ್ಟು ಅಪರಾಧಗಳಲ್ಲಿ ಭಾಗಿಯಾಗಿದ್ದ ಕಳ್ಳರನ್ನು ಪತ್ತೆಹಚ್ಚಿ ಸೆರೆ ಹಿಡಿದ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶೀಘ್ರವಾಗಿ ಅಪರಾಧಿಗಳ ಮೇಲೆ  ಶಿಸ್ತು ಕ್ರಮಗಳನ್ನು ಚಿಕ್ಕಮಗಳೂರು ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅಪರಾಧಿಗಳಿಗೆ ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಸೂಕ್ತ ರೀತಿಯಲ್ಲಿ ಕಾನೂನಿನ ಪರಿಚಯ ಮಾಡಿಸುತ್ತಿದ್ದಾರೆ.