ಕೊಪ್ಪ :(ನ್ಯೂಸ್ ಮಲ್ನಾಡ್ ವರದಿ) ಹಿಂದೂ ಕುಟುಂಬವನ್ನು ಅನ್ಯಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾ.ಪಂ ವ್ಯಾಪ್ತಿಯ ಹೆಗ್ಗಾರು ಗ್ರಾಮದ ಸುಧೀರ್ ಎಂಬುವವರ ಮನೆಯಲ್ಲಿ ಈ ಮತಾಂತರ ಘಟನೆಯು ನಡೆದಿದೆ. ಇಲ್ಲಿನ ಹಿಂದೂ  ಕುಟುಂಬವನ್ನು ಬೇರೆ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಹಿಡಿದು, ಜಯಪುರದ ಆರಕ್ಷಕ ಠಾಣೆಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಈ ಸಂದರ್ಭದಲ್ಲಿ ಮಣಿಕಂಠನ್ ಕಂದಸ್ವಾಮಿ, ಹಾಲಪ್ಪ, ಪ್ರಸನ್ನ ಜಯಪುರ, ಸಂಪತ್, ಅವಿನಾಶ್ ಗಡಿಕಲ್, ಪದ್ಮನಾಭ, ಸಂದೀಪ್ ಮಂಜಿನಕಟ್ಟೆ, ಸಂತೋಷ ಗುಂಡೊಳೆ, ಸುಬ್ರಮಣ್ಯ ಗದ್ದೇಮನೆ, ಚಂದ್ರಕಾಂತ್ ಬಿಟ್ನಮಕ್ಕಿ, ಉಮೇಶ್ ಇನ್ನಿತರರು ಹಾಜರಿದ್ದರು.