ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಇಂದು ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶವು ಪ್ರಕಟವಾಗಿದೆ.

ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು, ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆದು ಅಜ್ಜಂಪುರದ ಸೂರಿ ಶ್ರೀನಿವಾಸ್ ಅವರು 984 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸೂರಿ ಶ್ರೀನಿವಾಸ್ ಅವರ ಭಾರೀ  ಗೆಲುವಿನ ಅಂತರದಿಂದಾಗಿ ಉಳಿದ ಅಭ್ಯರ್ಥಿಗಳು ಮುಜುಗರಕ್ಕೀಡಾಗಿ ಸೋಲನ್ನು ಅನುಭವಿಸಿದ್ದಾರೆ. 

ಈ ಬಾರಿಯ ಕಸಾಪ ಚುನಾವಣೆ ಕಣವು ಬಹಳ ಜಿದ್ದಾ ಜಿದ್ದಿನಿಂದ ಕೂಡಿತ್ತು, ಗೆಲ್ಲುವ ನಿರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳಿದ್ದರು. ಚುನಾವಣೆ ಎದುರಿಸಲು ಹಲವಾರು ತಿಂಗಳುಗಳಿಂದ ತಯಾರಿ ನಡೆದಿತ್ತು. ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ನಡೆಸಿ ಚುನಾವಣೆಗೆ ತಾಲೀಮು ನಡೆಸಿದ್ದರು. ಈ ಫಲಿತಾಂಶವು ಹಲವರಿಗೆ ಖುಷಿಯನ್ನು ನೀಡಿದ್ದರೆ ಇನ್ನು ಕೆಲವರಿಗೆ ಬೇಸರ ತರಿಸಿದೆ.