ಹಾಸನ : (ನ್ಯೂಸ್ ಮಲ್ನಾಡ್ ವರದಿ)  ಬೇಲೂರಿನ ಬಿಕ್ಕೋಡು ಚರ್ಚ್ ಗೆ ಸಂಘ ಪರಿವಾರದ ಕಾರ್ಯಕರ್ತರು  ಭಾನುವಾರದ ವಿಶೇಷ ಪ್ರಾರ್ಥನೆಯ ಸಮಯದಲ್ಲಿ ನುಗ್ಗಿ ಪ್ರಾರ್ಥನೆಗೆ ಅಡ್ಡಿ ಪಡಿಸಿದ ಘಟನೆ ಬೆಳಕಿಗೆ ಬಂದಿದೆ.

ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಬೆಳಗ್ಗೆ ಬೀಕ್ಕೊಡು ಚರ್ಚ್ ಒಳಗೆ ಏಕಾಏಕಿ ನುಗ್ಗಿದ ಸಂಘ ಪರಿವಾರದ ಕಾರ್ಯಕರ್ತರು, ಘೋಷಣೆ ಕೂಗಿ ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಕ್ರಿಶ್ಚಿಯನ್ನರ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. 

ಚರ್ಚ್ ನಲ್ಲಿದ್ದವರಿಂದ ಸ್ಪಷ್ಟನೆ :

ಪ್ರಾರ್ಥನಾ ಸಮಯದಲ್ಲಿ ಚರ್ಚ್ ಒಳಗೆ ಪ್ರಾರ್ಥನೆ ಮಾಡುತ್ತಿದ್ದವರು ಯಾರು ಕೂಡ ತಮ್ಮನ್ನು ಬಲವಂತವಾಗಿ ಇಲ್ಲಿಗೆ ಕರೆ ತಂದಿಲ್ಲ, ನಮ್ಮ ಸ್ವ ಇಚ್ಛೆಯಿಂದ ಭಾನುವಾರದ ಪ್ರಾರ್ಥನೆಗೆ ಬಂದಿದ್ದೇವೆ ಎಂದರು. ಆದರೆ ಸಂಘ ಪರಿವಾರದ ಕಾರ್ಯಕರ್ತರು ಯಾವುದನ್ನೂ ಕೇಳದೆ ಪ್ರಾರ್ಥನೆಗೆ ಅಡ್ಡಿಪಡಿಸಿದರು ಎಂದರು.