ಚಿಕ್ಕಮಗಳೂರು : ದೇಶದ ರಕ್ಷಣೆ ಮಾಡುತ್ತಿದ್ದ ಕಾಫಿ ನಾಡಿನ ಮೂಲದ ವೀರ ಯೋಧನೋರ್ವ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.

ಕಡೂರು ತಾಲೂಕಿನ ಬಿಳವಾಲ ಗ್ರಾಮದ ಯೋಧ ಬಿ.ಕೆ ಶೇಷಪ್ಪ ಅವರು ಇಂದು ಮೃತ ಹೊಂದಿದ್ದಾರೆ. ಭಾರತೀಯ ಸೇನೆಯ ಬಿ.ಎಸ್. ಎಫ್. ನ ಮೆಕಾನಿಕಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಇಂದು ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ವಾಹನವನ್ನು ರಿಪೇರಿ  ಮಾಡುವ ಸಮಯದಲ್ಲಿ ವಾಹನಕ್ಕೆ ಕೊಟ್ಟಿದ್ದ ಜಾಕ್ ಅಕಸ್ಮಾತ್ ಜಾರಿ  ಅವರ ತಲೆಗೆ ಗಂಭೀರ ಗಾಯಗಳಾಗಿತ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಾಲ್ಕು ದಿನಗಳ ಕಾಲ ಕೋಮಾ ಸ್ಥಿತಿಯಲ್ಲಿಯೆ ಅವರು ಇದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯೋಧ ಶೇಷಪ್ಪ ಮೃತಪಟ್ಟಿದ್ದಾರೆ.

ದೇಶಕ್ಕಾಗಿ ಸದಾ ಮುನ್ನೆಲೆಯಲ್ಲಿ ಕೆಲಸ ಮಾಡುವ ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮವು ಶೋಕದಲ್ಲಿ ಮುಳುಗಿದೆ. ಮೃತರು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.