ಮಾಧ್ಯಮ ಲೋಕವೇ ಹಾಗೇ, ಇಲ್ಲಿ ಏನಾದರೊಂದು ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ನಷ್ಟದಿಂದ ಒಂದು ಸುದ್ದಿ ಸಂಸ್ಥೆ ಮುಚ್ಚುತ್ತಿರುವಾಗಲೇ ಇನ್ನೊಂದು ಮಾಧ್ಯಮ ಹೊಸ ಆಶಾವಾದದೊಂದಿದೆ ಕನಸು ಹೊತ್ತು ಚಿಗುರಲಾರಂಭಿಸಿರುತ್ತವೆ. ಇಲ್ಲಿ ಯಾರೂ ಶಾಶ್ವತರಲ್ಲ, ಎಲ್ಲರ ಭವಿಷ್ಯವೂ ಓದುಗರ, ನೋಡುಗರ ನಿರ್ಧಾರದ ಮೇಲೆ ಅವಲಂಬಿತ. ದಿನ ಕಳೆದಂತೆ ಡಿಜಿಟಲ್ ಮಾಧ್ಯಮ ಪ್ರಭಲ ಮಾಧ್ಯಮವಾಗಿ ಬೆಳೆದಿದೆ. ಘಟನೆ ನಡೆದ ಕೇವಲ ಹತ್ತೇ ನಿಮಿಷದಲ್ಲಿ ಸುದ್ದಿ ನಿಮ್ಮ ಮೊಬೈಲ್ ಸೇರುವ ಮಟ್ಟಕ್ಕೆ ಇಂದು ಪತ್ರಿಕೋದ್ಯಮ ಬೆಳೆದು ನಿಂತಿದೆ.

ಡಿಜಿಟಲ್ ಮಾಧ್ಯಮ ಅಂದರೇನು?

ಇಲ್ಲಿ ಅಕ್ಷರಗಳು ಮುದ್ರಣಗೊಂದು ಬೆಳಗ್ಗಿನ ಚಹಾದೊಂದಿಗೆ ನಿಮ್ಮ ಕೈಸೇರುವುದಿಲ್ಲ. ಇತ್ತ ಏನ್ ಸಮಾಚಾರ ನೋಡೋಣವೆಂದರೆ ಟಿವಿಯಲ್ಲೂ ಬರೋದಿಲ್ಲ. ಹೆಸರಲ್ಲೇ ಇರುವಂತೆ ಇದು ಸಂಪೂರ್ಣ ಡಿಜಿಟಲ್. ಅಕ್ಷರ ರೂಪದಲ್ಲಿರುವ ಸುದ್ದಿಗಳನ್ನು ವೆಬ್ ಪೂರ್ಟಲ್ ಮೂಲಕ ಜನರ ಮುಂದಿಟ್ಟರೆ, ದೃಶ್ಯ ರೂಪದ ಸುದ್ದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಮೊಬೈಲ್ ಸೇರುತ್ತವೆ.


ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆಯಾ? ನೀವು ಜರ್ನಲಿಸ್ಟ್ ಆಗಬೇಕಾ?

ಇಂದು ಪತ್ರಿಕೋದ್ಯಮವೆಂದರೆ ಹಲವರಿಗೆ ಪತ್ರಿಕಾ‘ಉದ್ಯಮ’ವಾಗಿಬಿಟ್ಟಿದೆ. ಎಲೆಕ್ಷನ್ ಸಮಯದಲ್ಲಿ ಮಾತ್ರ ಪೇಪರ್ ಪ್ರಿಂಟ್ ಹಾಕಿಸುವಾತನೂ ತಾನೋರ್ವ ಪತ್ರಕರ್ತನೆಂದು ಹೇಳುವುದು ಸತ್ಯಕ್ಕೆ ದೂರ ಉಳಿದಿಲ್ಲ. ಹಣ, ಹೆಸರಿಗಾಗಿ ಪತ್ರಿಕೋದ್ಯಮಕ್ಕೆ ಬರಬೇಡಿ, ಅದಕ್ಕೆ ನೂರಾರು ದಾರಿಗಳಿವೆ. ಅಕ್ಷರದ ಮೂಲಕ ತಪ್ಪನ್ನು ತಿದ್ದಿ, ನೊಂದವನಿಗೆ ನ್ಯಾಯ ಕೊಡಿಸುವ ಮನಸ್ಸಿದ್ದರಷ್ಟೇ ಮುಂದಿನ ನಿರ್ಧಾರಕ್ಕೆ ಬನ್ನಿ.

ಡಿಜಿಟಲ್ ಮಾಧ್ಯಮದ ಮೂಲಕ ನ್ಯೂಸ್ ಮಲ್ನಾಡ್ ‘ಡಿಜಿಟಲ್ ಜರ್ನಲಿಸ್ಟ್’ ಎಂಬ ವಿಭಿನ್ನ ಪ್ರಯತ್ನವೊಂದಕ್ಕೆ ಕೈಹಾಕುತ್ತಿದೆ. ಇಲ್ಲಿ ನಿಮ್ಮೂರಿಗೆ ನೀವೇ ವರದಿಗಾರರು. ಕಾರ್ಯಕ್ರಮಗಳು, ನಿಮ್ಮೂರಿನ ಸಮಸ್ಯೆ, ಭ್ರಷ್ಟಾಚಾರ ಮಾತ್ರವಲ್ಲದೆ, ಪ್ರಕಟವಾಗಲು ಯೋಗ್ಯವಾದ ಏನೇ ಸುದ್ದಿಯಿದ್ದರೂ ಅದನ್ನು ನಮಗೆ ನೀವು ಕಳುಹಿಸಬಹುದು. ಸುದ್ದಿಯಾಗಬೇಕಾದದ್ದು ಸುದ್ದಿಯಾಗದೇ ಇದ್ದಾದ ಅದನ್ನು ಸುದ್ದಿಯಾಗಿಸುವ ಜವಾಬ್ದಾರಿ ನ್ಯೂಸ್ ಮಲ್ನಾಡ್ ತಂಡದ್ದು. ಆದರೆ ಸುದ್ದಿಯಲ್ಲಿ ಸತ್ಯವಿರಬೇಕು, ನಿಷ್ಪಕ್ಷಪಾತ ನಿಲುವಿರಬೇಕು.

ಅರ್ಹತೆಗಳೇನು?

• ಪದವಿಯ ಅಗತ್ಯವಿಲ್ಲ. ಪತ್ರಕರ್ತನಿಗಿರಬೇಕಾದ ಮಹತ್ವದ ಗುಣ ಕಾಮನ್ ಸೆನ್ಸ್. ಪ್ರತಿನಿತ್ಯ ಸುದ್ದಿಗಳನ್ನು ಓದುಗರ ಆಸಕ್ತಿಗೆ ತಕ್ಕಂತೆ ಸುದ್ದಿ ಸಂಗ್ರಹಿಸುವ ಜಾಣ್ಮೆ ಇದ್ದರಾಯ್ತು.

• ಮೊದಲಿಗೆ ನಿಮಗೆ ಸಂಸ್ಥೆಯಿಂದ ಯಾವುದೇ ಐಡಿ ಕಾರ್ಡ್ ನೀಡುವುದಿಲ್ಲ. ಇದಕ್ಯಾವ ಅಪ್ಲಿಕೇಶನ್ ಕೂಡ ಹಾಕಬೇಕಿಲ್ಲ.

• ನೀವು ಕಳಿಸಿದ ಸುದ್ದಿ/ಲೇಖನಗಳನ್ನು ನಿಮ್ಮ ಹೆಸರಿನೊಂದಿಗೆ ಪ್ರಕಟಿಸಲಾಗುತ್ತದಾದರೂ ನೀವು ಸಂಸ್ಥೆಯ ಅಧಿಕೃತ ಸಿಬ್ಬಂದಿಯಲ್ಲ ಮತ್ತು ನಿಮಗೆ ಯಾವುದೇ ಸಂಬಳ ಕೂಡ ನೀಡಲಾಗುವುದಿಲ್ಲ.

ನೀವು ಮಾಡಬೇಕಿರುವುದೇನು?

• ನಿಮ್ಮೂರಿನ ಸುದ್ದಿಗಳನ್ನು ವಾಟ್ಸಾಪ್ ಅಥವಾ ಈ-ಮೈಲ್ ಮೂಲಕ ನಮಗೆ ಕಳುಹಿಸಿಕೊಡಬಹುದು.

• ಅನವಶ್ಯಕ ಸುದ್ದಿ ಬೇಡ. 

• ಯಾವುದೇ ಸುದ್ದಿ ಕಳುಹಿಸಿದರೂ ಅದಕ್ಕೆ ಸಂಬಂಧಿಸಿದ ಫೋಟೋ/ವೀಡಿಯೋ ಕಳುಹಿಸುವುದು ಅಗತ್ಯ.

• ದಾಖಲೆಗಳಿಲ್ಲದ ಯಾವುದೇ ಸುದ್ದಿಗಳೂ ಪ್ರಕಟವಾಗುವುದಿಲ್ಲ.

ಇವಿಷ್ಟರ ಜೊತೆಗೆ ನಮ್ಮ ಸಂಪರ್ಕವೂ ಅಷ್ಟೇ ಮುಖ್ಯ. ಆಸಕ್ತಿಯ ಜೊತೆಗೆ ವಿಷಯಕ್ಕೆ ಸಂಬಂದಿಸಿದ ಗೊಂದಲಗಳಿದ್ದರೆ ಸಂಪರ್ಕಿಸಿ. ಕಛೇರಿ ದೂರವಾಣಿ ಸಂಖ್ಯೆ 7349040128 (News Malnad ಎಂದು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ, ಯಾವುದೇ ಸುದ್ದಿ, ಸಮಸ್ಯೆ ಇದ್ದರೂ ನಮಗೆ ತಲುಪಿಸಿ)