ಜಯಪುರ : (ನ್ಯೂಸ್ ಮಲ್ನಾಡ್ ವರದಿ ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮಧ್ಯಪಾನ ಧೂಮಪಾನ ಮಾಡಿಕೊಂಡು ಶಾಲೆಗೆ ಆಗಮಿಸುತ್ತಿದ್ದಾರೆ  ಎಂದು ಆರೋಪಿಸಿ ಇಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕೊಪ್ಪ ತಾಲೂಕಿನ ಅತ್ತಿಕೊಡುಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲು ಗುಡ್ಡೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬೈರ್ಲಿಂಗಪ್ಪ ಅವರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ಮಧ್ಯಪಾನ ಹಾಗೂ ಧೂಮಪಾನ ಮಾಡಿಕೊಂಡು ಸುಮ್ಮನೆ ಶಾಲೆಯಲ್ಲಿ ಕೂತು ಕಾಲ ಕಳೆಯುತ್ತಾರೆ ಎಂದು ಆರೋಪಿಸಿ ಇಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧವಾಗಿ ಧರಣಿ ನಡೆಸಿದರು. 

ಈ ಹಿಂದಿನಿಂದಲೂ ಶಿಕ್ಷಕ ಬೈರ್ಲಿಂಗಪ್ಪ ಅವರ ಬೇಜವಾಬ್ದಾರಿ ನಡವಳಿಕೆಯ ಕುರಿತಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಯಾವುದೇ ಕ್ರಮಗಳನ್ನು ಅವರ ಮೇಲೆ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಇಂದು ಪ್ರತಿಭಟಿಸಿದರು. 

ಈ ಘಟನೆಯ ಕುರಿತಾಗಿ ಆದಷ್ಟು ಬೇಗ ಕ್ರಮ ವಹಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಕರ ವಿರುದ್ಧ ತೀವ್ರವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಏಕಾಏಕಿ ನಾಲ್ಕು ದಿನಗಳ ಕಾಲ ರಜೆ ಘೋಷಿಸಿದ ಶಿಕ್ಷಕ :

ಶಾಲೆಯ ಮೇಲಾಧಿಕಾರಿಗಳ ಹಾಗೂ ಶಾಲಾ ಎಸ್ ಡಿ ಎಂ ಸಿ ಸದಸ್ಯರ ಅನುಮತಿಯನ್ನು ಪಡೆಯದೆ ಶಾಲೆಗೆ ನಾಲ್ಕು ದಿನಗಳ ಕಾಲ ಶಿಕ್ಷಕ ರಜೆ ಘೋಷಣೆ ಮಾಡಿದ ಪರಿಣಾಮವಾಗಿ  ಇಂದು ಪೋಷಕವರ್ಗ ಹಾಗೂ ಗ್ರಾಮಸ್ಥರು ಪ್ರತಿಭಟಿಸಿದರು.

ಈ ಕೂಡಲೇ ಶಿಕ್ಷಕ ಬೈರ್ಲಿಂಗಪ್ಪ ಅವರನ್ನು ಅಮಾನತು ಮಾಡಬೇಕು ಹಾಗೂ ಬೇರೆ ಶಿಕ್ಷಕರನ್ನು ಶಾಲೆಗೆ ನೇಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ರೀತಿಯಲ್ಲಿ ಶಾಲೆಯನ್ನು ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.