ಚಿಕ್ಕಮಗಳೂರು : ಮನೆಯ ಬೀಗ ಮುರಿದು ಮನೆಯಲ್ಲಿದ್ದ ಹಣವನ್ನು ದೋಚಿದ ಕಳ್ಳರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಪಟ್ಟಣದ ಸಮೀಪವಿರುವ ಸನ್ನಿಧಿ ಲೇಔಟ್ ನ ಹತ್ತಿರದ ಅರವಿಂದ ಎಂಬುವವರ ಮನೆಯಲ್ಲಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಬೀಗವನ್ನು ಹಾಕಿ ಹೆಂಡತಿಯ ತಮ್ಮನ ಮದುವೆಗೆಂದು ಎರಡು ದಿನಗಳ ಕಾಲ ಕುಟುಂಬದ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
ಮನೆಯ ಹಿಂಬದಿಯ ಬಾಗಿಲ ಲಾಕ್ ಮುರಿದು 2.50 ಲಕ್ಷ ಹಣವನ್ನು ಹಾಗೂ ಒಂದು ಜೊತೆ ಕಿವಿಯೋಲೆ ಹಾಗೂ 30 ಸಾವಿರ ರೂಪಾಯಿ ಬೆಲೆ ಬಾಳುವ ಆಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಘಟನೆಯ ಕುರಿತಾಗಿ ಮನೆಯ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ತಂಡ ರಚನೆ ಮಾಡಿದ್ದಾರೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments