ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಸಿಬಿಆರ್ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಕಾನೂನು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ ಇದಕ್ಕೆ ಶೀಘ್ರವಾಗಿ ಪರಿಹಾರ ದೊರಕಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತಿರುವುದನ್ನು ನಿಲ್ಲಿಸಬೇಕು ಹಾಗೂ  ವಿಶ್ವವಿದ್ಯಾಲಯದ ದುರಾಡಳಿತದಿಂದ ವಿದ್ಯಾರ್ಥಿಗಳ ಭವಿಷ್ಯವು ನಷ್ಟದಲ್ಲಿದೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇದು ತುಂಬಲಾರದ ನಷ್ಟವಾಗಿದ್ದು, ಯುಜಿಸಿ ಆದೇಶದ ಮೇರೆಗೆ ಇಂಟರ್ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಅತಿಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕೆಂದು ಆಗ್ರಹಿಸಿದರು.

ಯುಜಿಸಿ ಆದೇಶದ ಮೇರೆಗೆ ಇಂಟರ್ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕಿತ್ತು ಆದರೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಯುಜಿಸಿ ಆದೇಶ ಮತ್ತು ಕರ್ನಾಟಕ ಸರ್ಕಾರದ ಆದೇಶವನ್ನು ಮೀರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಎರಡನೇ ಲಾಕ್ಡೌನ್ ಇದ್ದ ಕಾರಣ ಯಾವುದೇ ರೀತಿಯಲ್ಲೂ ಕೂಡ ತರಗತಿಯನ್ನು ನೆಡೆಸಿರುವುದಿಲ್ಲ, ಮತ್ತು ವಿ.ವಿ ಯ ಆಡಳಿತಯಂತ್ರದ ವೈಪಲ್ಯದ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುತ್ತಿರುವುದಲ್ಲದೆ ಐದು ಮತ್ತು ಮೂರು ವರ್ಷದ ಪದವಿಯ ಅವಧಿಯನ್ನು ಒಂದು ವರ್ಷ ವಿಳಂಬಗೊಳಿಸಿದೆ. -ಸಿ.ಎಂ ಚಿನ್ಮಯ್, ಜಿಲ್ಲಾಧ್ಯಕ್ಷರು, ವಿದ್ಯಾರ್ಥಿ ಒಕ್ಕೂಟ ಶಿವಮೊಗ್ಗ.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್, ಮಂಜುನಾಥ್ ಹೊಸನಗರ, ಸಾವನ್ವಿ, ಸಿಂಚನ, ದೀಪಕ್ ರಾಜಪ್ಪ, ದುಷ್ಯಂತ ಇನ್ನೂ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.