ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮತಾಂತರದಿಂದಾಗಿ ಸಂಕಷ್ಟದಲ್ಲಿರುವ ಜನರು ಈ ಕುರಿತಾಗಿ ಗ್ರಾಮ ಸಭೆಯಲ್ಲೂ ಚರ್ಚೆ ನಡೆಸಿದ್ದಾರೆ.
ಅಕ್ರಮವಾಗಿ ಮತಾಂತರ ಮಾಡುವುದನ್ನು ನಿಷೇಧ ಮಾಡಬೇಕು ಹಾಗೂ ಆ ಕುರಿತಾಗಿ ವ್ಯವಹರಿಸುವ ಪ್ರತಿಯೊಬ್ಬರಿಗೂ ಕಾನೂನು ಕ್ರಮಗಳ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ವಿಧಾನಸೌಧದಿಂದ ಹಿಡಿದು ಗ್ರಾಮಸಭೆಯವರೆಗೂ ಈಗ ಚರ್ಚೆಯಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು, ಈ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಯಾದವು, ಈ ಸಭೆಯಲ್ಲಿ ಮುಖ್ಯವಾಗಿ ಹಂತೂರು ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಾಣಿಗೆ ಮೋಹನ್ ರವರು ಅವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತಾಂತರದ ಕುರಿತಾಗಿ ಜನರಿಗೆ ತಿಳಿಸಿದರು. ಹಿಂದೂ ಧರ್ಮದವರನ್ನು ಮತಾಂತರ ಮಾಡುವ ಧಂದೆ ನಡೆಯುತ್ತಿದ್ದು, ಈಗಾಗಲೆ ಕೆಲವರು ಹಣದ ಆಸೆಗೆ ಮತಾಂತರಗೊಡಿದ್ದು ಅವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರುವ ಯೋಜನೆಗಳನ್ನು ಮಾಡಬೇಕು ಎಂದರು ಹಾಗೂ ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ ಪಂ ಉಪಾಧ್ಯಕ್ಷರಾದ ಕಣಚೂರು ವಿನೋದ್ ರವರು, ಗ್ರಾಮ ಸಭೆಯಲ್ಲಿ ಈ ವಿಚಾರವನ್ನು ನಿರ್ಣಯ ಮಾಡಿಕೊಂಡು ಗಂಭಿರವಾಗಿ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಎಲ್ಲಾದರೂ ಮತಾಂತರಕ್ಕೆ ಸಂಬಂದಿಸಿದಂತೆ ಗುಪ್ತ ಸಭೆಗಳು ಕಂಡಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಕಠಿಣ ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.
ಅದೇ ರೀತಿ ಸರ್ಕಾರಕ್ಕೆ ಗ್ರಾಮ ಸಭೆಯಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಲು ಹಂತೂರು ಗ್ರಾಮ ವ್ಯಾಪ್ತಿಯ ಒಮ್ಮತದ ಸಹಕಾರ ಇದೆ ಎಂದು ಭರವಸೆ ನೀಡಿದರು
ಈ ಗ್ರಾಮಸಭೆಯಲ್ಲಿ ಗ್ರಾ ಪಂ ಅಧ್ಯಕ್ಷರಾದ ಪಾರ್ವತಮ್ಮ,ಸದಸ್ಯರಾದ ಪಟೇಲ್ ರಮೇಶ್,ಆದರ್ಶ್,ವಿಜಯ್ ಹಾಗೂ ಗ್ರಾ,ಪಂ ಎಲ್ಲಾ ಸದಸ್ಯರು,ಪಂ ಅ ಅಧಿಕಾರಿಗಳು,ಎಲ್ಲಾ ಇಲಾಖೆಯ ಅಧಿಕಾರಿಗಳು,ಗ್ರಾಮಸ್ಥರು ಹಾಜರಿದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments