ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರನ್ನು ಸರ್ಕಾರ ರಾಜ್ಯಕ್ಕೆ ಗೃಹ ಸಚಿವರನ್ನಾಗಿ ಮಾಡಿದೆ ಆದರೆ ಅವರು ಬರೀ ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಕುಟುಕಿದ್ದಾರೆ.
ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಜನರು ತಲೆ ತಗ್ಗಿಸುವಂತಹ ಕೆಲಸ ಮಾಡುತ್ತಿದ್ದಾರೆ, ಆರಗ ಅವರು ಕೇವಲ ಪೊಲೀಸ್ ಠಾಣೆಗಳು ಹಾಗೂ ಆರ್,ಎಫ್,ಓ ಕಚೇರಿಗಳಿಗೆ ಸೀಮಿತರಾಗಿದ್ದಾರೆ, ಈ ಬೆಳವಣಿಗೆಗಳು ಸಮಂಜಸವಲ್ಲ ಎಂದರು.
ಕ್ಷೇತ್ರದ ಹಲವು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಅವರನ್ನು ಹತ್ತಿಕ್ಕುವ ಕೆಲಸವನ್ನು ಆರಗ ಜ್ಞಾನೇಂದ್ರ ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಬಿಜೆಪಿಗರ ತಪ್ಪಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಕೇವಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದರು.
ಬಿಜೆಪಿಯ ಕೆಲವರು ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದಾರೆ, ಆದರೆ ಅವರ ಮೇಲೆ ಯಾವುದೇ ಕ್ರಮಗಳು ಈ ವರೆಗೆ ದಾಖಲಾಗಿಲ್ಲ, ಸುಖಾ ಸುಮ್ಮನೆ ಕಾಂಗ್ರೆಸ್ಸಿಗರ ಮೇಲೆ ಕೇಸು ದಾಖಲಾಗುತ್ತಿವೆ. ಈಗಿನ ಸರ್ಕಾರದಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರೇ ಗೃಹ ಸಚಿವರಾಗಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

0 Comments