ಬಾಳೆಹೊನ್ನೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲಾದ್ಯಂತ ತೋಟದ ಕೂಲಿ ಕೆಲಸಕ್ಕಾಗಿ ಬರುವ ಅಸ್ಸಾಂನ ಕಾರ್ಮಿಕರು ಜಿಲ್ಲೆಯ ಹಲವೆಡೆಗಳಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಕಡಬಗೆರೆಯಲ್ಲಿ ಸಂತೆ ಸಮಯದಲ್ಲಿ ವ್ಯಾಪಾರಕ್ಕಾಗಿ ಅಂಗಡಿಗಳನ್ನು ಅಸ್ಸಾಂನ ಕಾರ್ಮಿಕರು ಹಾಕುತ್ತಿದ್ದರು,ಇದರ ವಿರುದ್ಧವಾಗಿ ಹಾಗೂ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದ್ದರೂ ಕೂಡ ಸಂಬಂಧಪಟ್ಟ ಇಲಾಖೆಯವರು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಖಾಂಡ್ಯ ಹೋಬಳಿಯ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. 

ಇಂದು ಕಡಬಗೆರೆ ಯಲ್ಲಿ ನಡೆಯುವ ಸಂತೆಯ ವ್ಯಾಪಾರದ ಸಮಯದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸಂತೆ ನಡೆಯುವ ಸ್ಥಳಕ್ಕೆ ತೆರಳಿ ಇನ್ನು ಮುಂದಿನ ದಿನಗಳಲ್ಲಿ ಅಸ್ಸಾಂನ ಕಾರ್ಮಿಕರು ಯಾವುದೇ ರೀತಿಯ ಅಂಗಡಿ ನಡೆಸಲು ಅವಕಾಶ ನೀಡಬಾರದೆಂದು ಅಧಿಕಾರಿಗಳಿಗೆ ಒತ್ತಾಯ ಮಾಡಿದರು. ಹಾಗೂ ಮುಂದಿನ ದಿನಗಳಲ್ಲಿ ಅವರು ಅಂಗಡಿಯನ್ನು ತೆರೆದರೆ ಕಾನೂನು ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಈ ಸಮಯದಲ್ಲಿ ಬಜರಂಗದಳದ ಕಾರ್ಯಕರ್ತರಾದ ಸಂದೇಶ ಉಜ್ಜಿನಿ, ರಾಕಿ, ಕೃಷ್ಣಮೂರ್ತಿ, ಶಿವಣ್ಣ, ಸುಭಾಷ್, ವಿಜಯ್ ಇನ್ನಿತರರು ಇದ್ದರು.