ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶ್ರೀ ರಾಮ ಸೇನೆಯ ವತಿಯಿಂದ ದತ್ತಮಾಲಾ ಅಭಿಯಾನವು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ.
ಚಿಕ್ಕಮಗಳೂರಿನ ಚಂದ್ರದ್ರೋಣ ಗಿರಿ ತಪ್ಪಲಿನ ಪರ್ವತದಲ್ಲಿರುವ ಗುರುದತ್ತಾತ್ರೇಯ ಪೀಠಕ್ಕೆ ಮಾಲೆ ಧರಿಸಿ ದತ್ತ ಪಾದುಕೆಗಳ ದರ್ಶನವನ್ನು ಪಡೆಯುವುದು ವಾಡಿಕೆ. ಅದರಂತೆಯೆ ಏಳು ದಿನಗಳಕಾಲ ದತ್ತಮಾಲೆಯನ್ನು ಧರಿಸಿ ಕೊನೆಯ ದಿನವಾದ ನವೆಂಬರ್ 14 ರಂದು ದತ್ತಾತ್ರೇಯ ಪೀಠದಲ್ಲಿ ದತ್ತ ಪಾದುಕೆಗಳ ದರ್ಶನವನ್ನು ಪಡೆಯುವುದು ಪ್ರತೀತಿಯಾಗಿದೆ.
ಇಂದು ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ ಶ್ರೀ ರಾಮಸೇನೆಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿ ಹಲವು ಮುಖಂಡರು ಕಾರ್ಯಕರ್ತರು ಇಂದು ದತ್ತಮಾಲೆಯನ್ನು ಶ್ರದ್ಧಾ ಭಕ್ತಿಯಿಂದ ಧರಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಸಹ ದತ್ತಮಾಲಾ ಅಭಿಯಾನದ ಅಂಗವಾಗಿ ಪಟ್ಟಣದ ಶ್ರೀ ವೆಂಕರಮಣಸ್ವಾಮಿ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮುಖಂಡರುಗಳು ದತ್ತಮಾಲೆಯನ್ನು ಧರಿಸಿದರು.ತನು ಕೊಟ್ಟಿಗೆಹಾರ, ವರದಿಗಾರರು.

0 Comments